Connect with us


      
ಕರ್ನಾಟಕ

ಶೀಘ್ರದಲ್ಲೇ ಕಾಗವಾಡಕ್ಕೆ ಸಂಚಾರಿ ಪಶು ವಾಹನ – ಸಚಿವ ಚೌಹಾಣ್

Iranna Anchatageri

Published

on

ಬೆಂಗಳೂರು: ಮಾರ್ಚ್ 21 (ಯು.ಎನ್.ಐ.) ಶೀಘ್ರದಲ್ಲೇ ಕಾಗವಾಡಕ್ಕೆ ಸಂಚಾರಿ ಪಶು ವಾಹನ ಸೇವೆ ಒದಗಿಸುವುದಾಗಿ ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಕಾಗವಾಡಕ್ಕೆ ಪಶು ಸಂಚಾರಿ ಚಿಕಿತ್ಸಾ ವಾಹನಕ್ಕೆ ಶಾಸಕ ಶ್ರೀಮಂತ ಪಾಟೀಲ್ ಬೇಡಿಕೆ ಇಟ್ಟರು.

ಕ್ಷೇತ್ರದಲ್ಲಿ ಹೈನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ರೈತರು ತೊಡಸಿಕೊಂಡಿದ್ದಾರೆ. ಆದರೆ, ಸಂಚಾರಿ ಚಿಕಿತ್ಸಾ ವಾಹನ ಕ್ಷೇತ್ರಕ್ಕೆ ಬರ್ತಿಲ್ಲ ಎಂದು ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಅಸಮಾಧಾನ ಹೊರಹಾಕಿದರು. ಈ ವಿಚಾರವನ್ನು ಸಚಿವರ ಭೇಟಿಯಾಗಿ ಅವರ ಗಮನಕ್ಕೂ ತರಲಾಗಿದೆ. ಆದ್ರೂ ಸಹ ಸಂಚಾರಿ ವಾಹನ ಕೇವಲ ಎರಡು ಬಾರಿ ಕ್ಷೇತ್ರಕ್ಕೆ ಬಂದಿದೆ ಎಂದು ಶ್ರೀಮಂತ ಪಾಟೀಲ್ ಆರೋಪಿಸಿದ್ರು.  ಹೀಗಾಗಿ ನಮ್ಮ ಕ್ಷೇತ್ರಕ್ಕೆ ಒಂದು ಸಂಚಾರಿ ಪಶು ವಾಹನ ನೀಡಬೇಕು ಎಂದ ಶ್ರೀಮಂತ ಪಾಟೀಲ್ ಆಗ್ರಹಿಸಿದರು.

ಶ್ರೀಮಂತ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್, ರಾಜ್ಯದಲ್ಲಿ ಮೊದಲ ಬಾರಿಗೆ ಸಂಚಾರಿ ಪಶು ಚಿಕಿತ್ಸಾ ವಾಹನ ಯೋಜನೆ ಜಾರಿಗೆ ಬರ್ತಿದೆ. ಕೇಂದ್ರದಿಂದ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಈ ತಿಂಗಳು ಆಗಮಿಸುತ್ತಿವೆ. ಶೀಘ್ರದಲ್ಲೇ ಕಾಗವಾಡಕ್ಕೂ ಸಂಚಾರಿ ಪಶು ವಾಹನ ನೀಡಲಿದ್ದೇವೆ ಎಂದು ಚೌಹಾಣ್ ಉತ್ತರಿಸಿದರು.

Share