Connect with us


      




ಬೆಂಗಳೂರು

ಸ್ಲಂ ಬೋರ್ಡ್ ನ 50 ಮನೆಗಳ ಜ.30 ರೊಳಗೆ ಪೂರ್ಣಗೊಳಿಸಲು ಸಚಿವ ಕೆ.ಗೋಪಾಲಯ್ಯ ಸೂಚನೆ

Vanitha Jain

Published

on

ಬೆಂಗಳೂರು.ಜ.11; ಮಹಾಲಕ್ಷ್ಮಿ ಲೇ ಔಟ್ ವಿಧಾನ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 44 ರ ಮಾರ ಪ್ಪನ ಪಾಳ್ಯದ ಗಜಾನನ ಸ್ಲಂ 2 ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಆಶ್ರಯ ಯೋಜನೆಯಡಿ ಮೊದಲ‌ ಹಂತದಲ್ಲಿ ಆರಂಭಿಸಿರುವ 50 ಮನೆಗಳ ಕಾಮಗಾರಿಯನ್ನು ಇದೇ ಜನವರಿ 30 ರೊಳಗೆ ಮುಗಿಸಬೇಕೆಂದು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಿಬಿಎಂಪಿ ಇಂಜಿನಿಯರ್ ಗಳಿಗೆ ಸೂಚಿಸಿದರು.

ಇಂದು ಬೆಳಿಗ್ಗೆ ಗಜಾನನ ಸ್ಲಂ 2 ರಲ್ಲಿ ಸಾರ್ವಜನಿಕ ಸೌಲಭ್ಯ ಕುರಿತು ಪರಿವೀಕ್ಷಣೆ ನಡೆಸಿ ಈ ಸೂಚನೆ ನೀಡಿದ ಸಚಿವರು, ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗಿರುದುವುದಕ್ಕೆ ಇಂಜಿನಿಯರ್ ಗಳ ವಿರುದ್ದ ಕಿಡಿಕಾರಿದರು.

ಮನೆಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಒಂದು ವೇಳೆ ಕಾಮಗಾರಿಯಲ್ಲಿ ಲೋಪ ಅಥವಾ ಕಳಪೆ ಕಾಮಗಾರಿ ಕಂಡು ಬಂದರೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಂಜಿನಿಯರ್ ಗಳಿಗೆ ಸಚಿವರು ಎಚ್ಚರಿಕೆ ನೀಡಿದರು.

ಇದೇ ವೇಳೆ ಶಂಕರ ಮಠ ಪಾರ್ಕ್ ನಿರ್ವಹಣೆ ಸರಿ ಇಲ್ಲದಿರುವುದನ್ನು ಗಮನಿಸಿದ ಸಚಿವರು, ಹಾಳಾಗಿರುವ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ನೆಡಬೇಕು ಮತ್ತು ಅವುಗಳನ್ನು ಸರಿಯಾಗಿ ಪೋಷಣೆ ಮಾಡಬೇಕು. ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಎಂ.ಮಹದೇವ್, ಪುಟ್ಟಣ್ಣ. ವೆಂಕಟೇಶಮೂರ್ತಿ ರೈಲ್ವೆ ನಾರಾಯಣ್ ವೆಂಕಟೇಶ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Share