Connect with us


      
ರಾಜಕೀಯ

ಕರ್ನಾಟಕ ಕಾಂಗ್ರೆಸ್ ನಲ್ಲಿ ಕೆ 23 ಗ್ಯಾಂಗ್ ಪ್ರಾರಂಭಕ್ಕೆ ಮುಹೂರ್ತ: ಆರ್. ಅಶೋಕ್

Lakshmi Vijaya

Published

on

ಬೆಂಗಳೂರು: ಮೇ 13 (ಯು.ಎನ್.ಐ.) ಕಾಂಗ್ರೆಸ್ ನಲ್ಲಿನ ಬೇಗುದಿ ಬಯಲಾಗಲು ಕಾರಣವಾದ ರಮ್ಯಾ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,  ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಇಲ್ಲ ಅಂತ ಗೊತ್ತಾಗುತ್ತಿದೆ ಎಂದಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಅಲ್ಲಿ ಹೊಂದಾಣಿಕೆಯಿಲ್ಲ. ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಅಂತ ಗೊತ್ತಿಲ್ಲ. ಹೀಗಾಗಿ ಈಗಿನಿಂದ್ಲೇ ಟವೆಲ್ ಹಾಕುವುದಕ್ಕೆ ಹೋಗಿ ಈ ಗಲಾಟೆ ಪ್ರಾರಂಭ ಆಗಿದೆ. ಒಂದು ಕಡೆ ಜಮೀರ್ ಗುಂಪು, ಮತ್ತೊಂದು ಕಡೆ ರಮ್ಯ ಗುಂಪು.

ದೆಹಲಿಯಲ್ಲಿ ಜಿ 23 ಗ್ಯಾಂಗ್ ಇದೆ . ಈಗ ಕರ್ನಾಟಕದಲ್ಲಿ ಕೆ 23 ಗ್ಯಾಂಗ್ ಪ್ರಾರಂಭ ಆಗುತ್ತದೆ . ಇಲ್ಲೂ ಕೂಡ ಕೆ 23 ಗ್ಯಾಂಗ್ ಪ್ರಾರಂಭ ಆಗುವುದಕ್ಕೆ ಕುಮಾರಿ ರಮ್ಯ ಮುಹೂರ್ತ ಇಟ್ಟಿದ್ದಾರೆ. ಬಣಗಳ ದೊಡ್ಡ ಟೀಮ್ ಕಾಂಗ್ರೆಸ್ ನಲ್ಲಿ ರೆಡಿ ಆಗ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಕಾಂಗ್ರೆಸ್ ನಾಯಕನ ನಡುವಿನ ಕಿತ್ತಾಟದ ಬಗ್ಗೆ ವ್ಯಂಗ್ಯವಾಡಿದ್ರು.

Share