Connect with us


      
ಸಾಹಿತ್ಯ

ಚಂಪಾ ನಿಧನಕ್ಕೆ ಸಚಿವ ಸುನಿಲ್ ಕುಮಾರ್ ತೀವ್ರ ಶೋಕ

Vanitha Jain

Published

on

ಬೆಂಗಳೂರು: ಜನೆವರಿ 10 (ಯು.ಎನ್.ಐ.) ಕನ್ನಡ ಸಾಹಿತ್ಯದ ದಿಗ್ಗಜ,ಪ್ರಗತಿಪರ ಚಿಂತಕ,ಹೋರಾಟಗಾರಪ್ರೊ. ಚಂದ್ರಶೇಖರ ಪಾಟೀಲ್ (ಚಂಪಾ) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ ಎಂದು ತಿಳಿದು ಆಘಾತವಾಗಿದೆ, ಇದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಆದ ಬಹು ದೊಡ್ದ ನಷ್ಟ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ.

ಐದು ದಶಕಕಕ್ಕೂ ಹೆಚ್ಚು ಕಾಲ ದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದ ಚಂಪಾ, ನೆಲ,ಜಲ,ಭಾಷೆ ಮತ್ತು ಸಂಸ್ಕೃತಿ ಕಾಪಾಡುವ ದೃಷ್ಟಿಯಿಂದ ನಡೆಸಿದ ಹೋರಾಟಗಳು ಮಹತ್ವದ್ದಾಗಿದೆ.

ಸಂಕ್ರಮಣ ಪತ್ರಿಕೆ ಮೂಲಕ ಅವರು ಕನ್ನಡದ ಅಸ್ಮಿತೆ ಕಾಪಾಡಿದವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ಅವರ ಸೇವೆ ಅವಿಸ್ಮರಣೀಯ.

ಕನ್ನಡ ನೆಲ-ಜಲ- ಸಂಸ್ಕೃತಿ-ಭೂಮಿ- ಭಾಷೆ ಯನ್ನು ಕಾಪಾಡುವ ನಿಟ್ಟಿನಲ್ಲಿ ಐದು ದಶಕಗಳ ಕಾಲ ನಮ್ಮ ನಡುವೆ ರಾಜಿಯಾಗದೆ ಹೋರಾಡಿದ್ದಾರೆ. ತಮ್ಮ ದಿಟ್ಟ ವ್ಯಕ್ತಿತ್ವದಿಂದ ನಾಡಿನ ಜನರನ್ನ ಪ್ರಭಾವಿಸಿದ್ದಾರೆ , ಚಂಪಾ ಬದುಕಿನುದ್ದಕ್ಕೂ ಬಂಡಾಯ ಸಾಹಿತಿಯಾಗಿಯೇ ಗುರುತಿಕೊಂಡಿದ್ದವರು. ಎಂದೂ ಸ್ಥಾನ ಮಾನ ಗಳಿಗೆ ಹಾತೊರೆದವರಲ್ಲ,ಅದೇ ಅವರನ್ನು ಅರಸಿ ಬಂದಿವೆ,ಅವರಿಗೆ ಪಂಪ ಪ್ರಶಸ್ತಿಯೂ ಸೇರಿದಂತೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ,ಪುರಸ್ಕಾರ ಸಂದಿವೆ.

ಪ್ರೊ. ಚಂಪಾ ಅವರು ಈ ಇಳಿವಯಸ್ಸಿನಲ್ಲಿ ಸಹ ಕುಗ್ಗದ ಉತ್ಸಾಹ ದೊಂದಿಗೆ ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೈಸೂರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇಡೀ ನಾಡಿನ ಜನರ ರನ್ನ ಕನ್ನಡ ಸಂಸ್ಕೃತಿ ಪರವಾಗಿ ಉದ್ದೀಪಿಸಿದವರು. ಅವರು ಎಂದೂ ತಾವು ನಂಬಿದ ಸಿದ್ದಾಂತಗಳ ಜೊತೆ ರಾಜಿ ಮಾಡಿಕೊಂಡವರಲ್ಲ. ಚಂಪಾ ಅವರ ಅಗಲಿಕೆ ಯಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಮ್ಮ ಸಂತಾಪ ಸಚಿವ ಸುನಿಲ್ ಕುಮಾರ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Share