Connect with us


      
ಸಾಮಾನ್ಯ

ವಿಧಾನಸಭೆ ಸದನದಲ್ಲಿ ಸಚಿವರ ಗೈರು, ಸಚಿವರ ವಿರುದ್ದ ಸ್ಪೀಕರ್ ಗರಂ

UNI Kannada

Published

on

ಬೆಂಗಳೂರು: ಮಾರ್ಚ್ 09 (ಯು.ಎನ್.ಐ) ವಿಧಾನಸಭೆ  ಪ್ರಶ್ನೋತ್ತರ ಕಲಾಪದಲ್ಲಿ ಸಚಿವರು ಗೈರು ಹಿನ್ನೆಲೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯ ಮಾತನಾಡಿದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರ ಪ್ರಶ್ನೆಗಳನ್ನ  ಹೊತ್ತು ಪರಿಹಾರ ಕಂಡುಕೊಳ್ಳಲು ಬಂದಿದ್ದರೇ ಉತ್ತರ ನೀಡಬೇಕಾದ ಸಂಭಂದ ಪಟ್ಟ ಸಚಿವರು ಗೈರಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಸಚಿವರ ವಿರುದ್ದ ಕೆಂಡಾಮಂಡಲವಾಗಿದ್ದಾರೆ. ನಿನ್ನೆ ಮೊನ್ನೆಯಿಂದ ನಾನು ಗಮನಿಸ್ತಿದೀನಿ ಸದನಕ್ಕೆ ಬರದೇ ಹೋದರೂ ಅಡ್ಡಿ ಇಲ್ಲ ಎಂಬ ಭಾವನೆ ಇದೆ ಸಚಿವರಲ್ಲಿ ಇದು ಶೋಭೆ ತರಲ್ಲ , ಪ್ರಶ್ನೋತ್ತರ ಕಲಾಪ ಮತ್ತು ಸದನದಲ್ಲಿ ಕಡ್ಡಾಯವಾಗಿ ಹಾಜರಿರೋರು ಇರಲೇಬೇಕು ಎಂದು ಆಗ್ರಹಿಸಿದರು.

ಯತ್ನಾಳ್ ಆಕ್ಷೇಪ

ಇದೇ ವಿಚಾರಕ್ಕೆ ಧ್ವನಿ ಗೂಡಿಸಿದ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್, ಮಂತ್ರಿಯಾಗಬೇಕು ಅಂತ ಎಲ್ಲೆಲ್ಲೋ ಹೋಗಿ  ಯಾರ್ಯಾರ ಬಳಿಯೋ ಹೋಗಿ ಲಾಬಿ ಮಾಡ್ತಾರೆ ಆದರೆ ಸದನದಲ್ಲಿ ಬಂದು ಉತ್ತರ ಕೊಡಲ್ಲ ಅಂಥೋರು ಯಾಕೆ ಮಂತ್ರಿ ಆಗ್ಬೇಕು? ಸ್ವಪಕ್ಷೀಯರ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಸದಸನದಲ್ಲಿ ವಿರೋಧ ಪಕ್ಷದ ನಾಯಕರು ಯತ್ನಾಳ್ ರಿಗೆ ನೀವೇ ಮಂತ್ರಿ ಆಗಿಬಿಡಿ ಯತ್ನಾಳರೇ ಎಂದ ಕಾಂಗ್ರೆಸ್ ಸದಸ್ಯರು  ಸಚಿವರು ಸದನಕ್ಕೆ ಬರುವಂತೆ ನೀವೇ ಏನಾದ್ರೂ ರೂಲಿಂಗ್ ಕೊಡಬೇಕು ಎಂದರು

Share