Connect with us


      
ರಾಜಕೀಯ

ವಿಧಾನಪರಿಷತ್ತಿಗೆ ಗೋಪಿನಾಥ್ ರೆಡ್ಡಿ ಆಯ್ಕೆ- ಅಭಿನಂದನೆ

Kumara Raitha

Published

on

ಬೆಂಗಳೂರು: ಡಿಸೆಂಬರ್‌ ೧೪ (ಯು.ಎನ್.ಐ.) ಮಹಾನಗರ  ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಗೋಪಿನಾಥ್ ರೆಡ್ಡಿ ಅವರು ಇಂದು ಸಂಜೆ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ ಅವರು ಗೋಪಿನಾಥ್ ರೆಡ್ಡಿ ಅವರಿಗೆ ಹಾರಾರ್ಪಣೆ ಮಾಡಿ ಪೇಟ ತೊಡಿಸುವ ಮೂಲಕ ಅಭಿನಂದಿಸಿದರು. ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ವಿಭಾಗ ಸಹ ಪ್ರಭಾರಿಗಳಾದ ರಾಜಣ್ಣ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾದ ಲೋಕೇಶ್ ಅಂಬೆಕಲ್ಲು ಮತ್ತು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಗೋಪಿನಾಥ್ ರೆಡ್ಡಿ ಅವರು ಇದೇ ವೇಳೆ ಭಾರತ ಮಾತೆ ಮತ್ತು ಜಗನ್ನಾಥ ರಾವ್ ಜೋಷಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು..

Share