Published
2 weeks agoon
ಬೆಂಗಳೂರು: ಮೇ ೦೮ (ಯು.ಎನ್.ಐ.) ರಾಜ್ಯದ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪೋಷಕರಿಂದ ಭಾರಿ ಶುಲ್ಕ ವಸೂಲಾತಿ ಮಾಡುತ್ತಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಪ್ರತಿಪಾದಿಸಿದರು.
ಅವರಿಂದು ಬೆಂಗಳೂರಿನ ಪ್ರಕಾಶನಗರ ಬಡಾವಣೆಯಲ್ಲಿ ಮೊದಲಿಯಾರ್ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಮೊದಲಿಯಾರ್ ಸೇವಾ ಸಂಘದ ವಜ್ರ ಮಹೋತ್ಸವವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘಸಂಸ್ಥೆಗಳ ಮೂಲಕ ಬಡಜನರಿಗೆ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಮುಂದೆ ಬಂದರೆ ಸರ್ಕಾರ ಸಹಾಯ ಮಾಡುತ್ತದೆ. ರಾಜ್ಯದಲ್ಲಿ ೬೫೦೦ ಶಾಲಾ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಇದೊಂದು ದಾಖಲೆ. ಹಿಂದಿನ ಯಾವ ಸರ್ಕಾರವೂ ಇಷ್ಟೊಂದು ಸಂಖ್ಯೆಯಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಮಾಡಿರಲಿಲ್ಲ ಎಂದು ಹೇಳಿದರು.
ಮೊದಲಿಯಾರ್ ಸಮುದಾಯಕ್ಕೆ ದೊಡ್ಡ ಇತಿಹಾಸ ಇದೆ. ತಮಿಳುನಾಡು ಇರಲಿ ಕರ್ನಾಟಕ ಇರಲಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಮೈಸೂರು ಸಂಸ್ಥಾನ ಇತಿಹಾಸದಲ್ಲಿ ಒಳ್ಳೆಯ ಹೆಜ್ಜೆ ಗುರುತು ಇಟ್ಟು ಹೋಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ರಾಮ ಸ್ವಾಮಿ ಮೊದಲಿಯಾರ್ ಅವರ ಪಾತ್ರ ಬಹಳ ಮುಖ್ಯ. ವಿಧಾನಸೌಧದ ನಿರ್ಮಾಣದಲ್ಲಿ ಮೊದಲಿಯಾರ್ ಸಮುದಾಯ ನಾಯಕರು ಬಹಳ ಪಾತ್ರ ವಹಿಸಿದ್ದಾರೆ ಎಂದು ಪ್ರಶಂಸಿಸಿದರು.
ಬೆಂಗಳೂರು ನಿರ್ಮಾದಲ್ಲಿಯೂ ಇವರ ಪಾತ್ರ ಗಮನಾರ್ಹ. ಮೊದಲಿಯಾರ್ ಸಮುದಾಯ ಶಿಕ್ಷಣದಲ್ಲೂ ಬಹಳ ಮುಂದಿದೆ.. ಐಎಎಸ್ ಐಪಿಎಸ್ ನಲ್ಲೂ ಈ ಸಮುದಾಯದವರು ಬಹಳ ಹೆಸರು ಮಾಡಿದ್ದಾರೆ. ಸ್ವಾವಲಂಬನೆ ಜೊತೆಗೆ ಸ್ವಾಭಿಮಾನಿ ಸಮುದಾಯ ಕೂಡ ಆಗಿದ್ದಾರೆ ಬಹಳಷ್ಟು ವಿದ್ಯಾಸಂಸ್ಥೆಗಳನ್ನು ನಿರ್ಮಾಣ ಮಾಡಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ನಾನು ನಿಮ್ಮ ಸಮುದಾಯಕ್ಕೆ ಮನವಿ ಮಾಡುತ್ತೇನೆ. ಈ ನಾಡು ಕಟ್ಟಲು ನಿಮ್ಮ ಮಾರ್ಗದರ್ಶನ ಮತ್ತು ಸೇವೆ ಅವಶ್ಯಕತೆ ಇದೆ. ಎಂದು ಮುಖ್ಯಮಂತ್ರಿ ಹೇಳಿದರು.
ಸಮಾರಂಭದಲ್ಲಿ ಶಾಸಕ ಸುರೇಶ್ ಕುಮಾರ್, ಸಂಸದ ಪಿಸಿ ಮೋಹನ್, ಮೊದಲಿಯಾರ್ ಸೇವಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಟಿಜಿಟಿ ಮಳೆಯಲ್ಲಿಯೇ ಮುಖ್ಯಮಂತ್ರಿ ಬೆಂಗಳೂರು ವೀಕ್ಷಣೆ
ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಬಿಡುವುದಿಲ್ಲ: ಸಚಿವ ಕೆ.ಗೋಪಾಲಯ್ಯ ಭರವಸೆ
ತೆರೆಯದ ಆಗಮನ ದ್ವಾರ; ಪರದಾಡಿದ ಪ್ರಯಾಣಿಕರು
ಬೆಂಗಳೂರು: ಮಳೆಹಾನಿ ಸ್ಥಳಗಳಲ್ಲಿ ಸಿಎಂ ಪರಿವೀಕ್ಷಣೆ
ಬಿಷಪ್ ಕಾಟನ್ ಶಾಲೆಯ ವಿದ್ಯಾರ್ಥಿಗಳ ನಡುವೆ ಮಾರಾಮಾರಿ; ವಿಡಿಯೋ ವೈರಲ್
ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಕಾರ್ಯ ವೈಫಲ್ಯ ತೋರಿಸಿಕೊಟ್ಟ ಯುವಕ; ಹಿಗ್ಗಾಮುಗ್ಗಾ ತರಾಟೆ