Connect with us


      
ದೇಶ

ಉತ್ತರ ಪ್ರದೇಶದಲ್ಲಿ ಮೋದಿ ಆಡಿದ್ದೇ ಆಟ! ಒಂದೂವರೆ ತಿಂಗಳಲ್ಲಿ 14 ರ‍್ಯಾಲಿ

Iranna Anchatageri

Published

on

ಲಖನೌ : ಜನೆವರಿ 08 (ಯು.ಎನ್.ಐ) ಯೋಗಿ ಹಾಗೂ ಮೋದಿ ಜೋಡಿ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಬೇಕೆಂದು ಕಳೆದ ಒಂದೂವರೆ ತಿಂಗಳಿನಿಂದ ಭಾಗಶಃ ಎಲ್ಲ ಜಿಲ್ಲೆಗಳಲ್ಲೂ ಮತದಾರರನ್ನು ಭೇಟಿಯಾಗುವ ಕೆಲಸ ಮಾಡಿದರು. ಉತ್ತರ ಪ್ರದೇಶದ ಸ್ಟಾರ್ ಕ್ಯಾಂಪೇನರ್ ಆಗಿದ್ದ ಪ್ರಧಾನಿ ಮೋದಿ ಅವರು, ನವೆಂಬರ್ 16ರಿಂದ ಜನವರಿ 2ರವರೆಗೆ ಯುಪಿಯ ಪ್ರತಿಯೊಂದು ಪ್ರದೇಶಗಳಲ್ಲಿ ರ‍್ಯಾಲಿಗಳು ನೆರವೇರಿದವು. ಪೂರ್ವಾಂಚಲದಿಂದ ಪಶ್ಚಿಮ ಯುಪಿವರೆಗೆ ಬರೋಬ್ಬರಿ 14 ಚುನಾವಣಾ ಸಮಾವೇಶಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು.

ಈ ಸಮಾವೇಶಗಳ ನೆಪದಲ್ಲಿ ಅವರು ಎಲ್ಲಾ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿದರು. ಅವರ ಕೊನೆಯ ರ‍್ಯಾಲಿಯನ್ನು ಜನೆವರಿ 9 ರಂದು ಲಕ್ನೋದಲ್ಲಿ ಆಯೋಜನೆಯಾಗಿತ್ತು. ಈ ಸಭೆಯ ನಂತರವೇ ಆಯೋಗವು ಚುನಾವಣಾ ದಿನಾಂಕವನ್ನು ಪ್ರಕಟಿಸಲಿದೆ ಎಂದು ನಂಬಲಾಗಿತ್ತು. ಆದರೆ, ಮೂರನೇ ಅಲೆಯಿಂದಾಗಿ ಈ ಸಮಾವೇಶವನ್ನು ರದ್ದು ಮಾಡಲಾಯಿತು. ಈ ಕಾರಣಕ್ಕಾಗಿಯೇ ಚುನಾವಣಾ ಆಯೋಗ, ಜನವರಿ 10ರ ಬದಲಾಗಿ 2 ದಿನ ಮುಂಚಿತವಾಗಿಯೇ ಪತ್ರಿಕಾಗೋಷ್ಠಿ ನಡೆಸಿ ಇಂದು ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ.

ಕಾಕತಾಳೀಯ ಎಂಬಂತೆ ಮೋದಿ ಅವರ ಕೊನೆ ಸಭೆ ಮೀರತ್ ನಲ್ಲಿ ಆಯೋಜನೆಗೊಂಡಿತ್ತು. ಈಗ ಘೋಷಣೆಗೊಂಡಿರುವ ಚುನಾವಣೆ ದಿನಾಂಕದಂತೆ ಮೀರತ್ ನಿಂದಲೇ ಮತದಾನ ಆರಂಭವಾಗಲಿದೆ. ಮೊದಲ ಹಂತದಲ್ಲಿ ಯುಪಿಯ 11 ಜಿಲ್ಲೆಗಳ 58 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಜಿಲ್ಲೆಗಳೆಂದರೆ ಮೀರತ್, ಅಲಿಗಢ, ಆಗ್ರಾ, ಮಥುರಾ, ಶಾಮ್ಲಿ, ಮುಜಫರ್ ನಗರ, ಬಾಗ್‌ಪತ್, ಗಾಜಿಯಾಬಾದ್, ಗೌತಮ್ ಬುಧ್ ನಗರ, ಹಾಪುರ್, ಬುಲಂದ್‌ಶಹರ್ ಗಳಾಗಿವೆ. ಪ್ರಧಾನಿಯವರು ತಮ್ಮ ಕೊನೆಯ ಸಮಾವೇಶಗೊಂಡ ಮೀರತ್‌ನಲ್ಲಿ ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ನೆರವೇರಿಸಿದ್ದರು.

Share