Published
6 months agoon
By
UNI Kannadaಬೆಂಗಳೂರು: ಜನೆವರಿ 07 (ಯು.ಎನ್.ಐ) ಪಂಜಾಬಿನಲ್ಲಿ ಚುನಾವಣಾ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯದ ಹುಸಿ ಪ್ರಚಾರಕ್ಕೊಳಗಾಗಿದ್ದಾರೆ ಎಂದಿರುವ ಕಾಂಗ್ರೆಸ್ನ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಪ್ರಶ್ನೆ ಕೇಳಿದ್ದಾರೆ.
ಪ್ರಧಾನಿಗಳ ವೇಳಾಪಟ್ಟಿಯನ್ನು ಗಮನಿಸಿದಾಗ ಪಂಜಾಬಿನ ನಿಗದಿತ ಕಾರ್ಯಕ್ರಮವಿದ್ದ ಸ್ಥಳಕ್ಕೆ ಹೆಲಿಕಾಪ್ಟರ್ ನಲ್ಲಿ ಬರಬೇಕಿದ್ದ ಪ್ರಧಾನಿಗಳು ರಸ್ತೆ ಮಾರ್ಗವನ್ನು ಅನುಸರಿಸಿದ್ದು ಏಕೆ ಎಂದು ಕಾರಣ ಕೇಳಿದ್ದಾರೆ.
ಅಲ್ಲದೇ ಪಂಜಾಬಿನ ಮುಖ್ಯಮಂತ್ರಿಗಳು ಹೇಳುವಂತೆ ಮೋದಿಯವರ ಚುನಾವಣಾ ಪ್ರಚಾರದಲ್ಲಿ 70 ಸಾವಿರ ಜನರು ಸೇರಬೇಕಿತ್ತು. ಆದರೆ ಕಾರ್ಯಕ್ರಮವಿದ್ದ ಸ್ಥಳಕ್ಕೆ ತಲುಪಲು ಅಲ್ಲಿ ಕೇವಲ 700 ಜನರು ಮಾತ್ರ ಸೇರಿದ್ದರಿಂದ ಪ್ರಧಾನಿಗಳು ಅಲ್ಲಿಂದ ವಾಪಸ್ಸಾಗಿದ್ದಾರೆ ಎಂದು ತಿಳಿಸಿದ್ದಾರೆ.ಹೀಗಾಗಿ ಭದ್ರತಾ ವೈಫಲ್ಯದ ಕುರಿತು ಪಂಜಾಬ್ ಸಿಎಂ ನೀಡಿರುವ ಹೇಳಿಕೆಯು ಮಹತ್ವದ್ದಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.