Connect with us


      
ವಿದೇಶ

ಫ್ರಾನ್ಸ್ ಅಧ್ಯಕ್ಷ, ಸಿಂಗಾಪುರ ಪ್ರಧಾನಿ ಜೊತೆ ಮೋದಿ ಮಾತುಕತೆ

pratham

Published

on

ರೋಮ್‌, ಅ  31 (ಯುಎನ್‌ ಐ) –  16ನೇ   ಜಿ-20   ಗುಂಪಿನ     ದೇಶಗಳ    ಶೃಂಗಸಭೆಯ      ಬಿಡುವಿನಲ್ಲಿ   ಪ್ರಧಾನಿ ನರೇಂದ್ರ ಮೋದಿ     ಶನಿವಾರ      ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು   ಭೇಟಿಮಾಡಿ ಮಾತುಕತೆ ನಡೆಸಿದರು.
ಭಾರತ-ಫ್ರಾನ್ಸ್  ನಡುವಣ   ಕಾರ್ಯತಂತ್ರ    ದ್ವಿಪಕ್ಷೀಯ  ಸಂಬಂಧಗಳು,  ಪರಸ್ಪರ    ಹಾಗೂ    ಅಂತರರಾಷ್ಟ್ರೀಯ ಹಿತಾಸಕ್ತಿಗಳಿಗೆ   ಸಂಬಂಧಿಸಿದ    ಅಂಶಗಳ  ಕುರಿತು   ಉಭಯ ನಾಯಕರು   ಚರ್ಚಿಸಿದರು.    ಈ  ಸಂದರ್ಭದಲ್ಲಿ  ವಿದೇಶಾಂಗ ಸಚಿವ ಎಸ್ ಜೈಶಂಕರ್,  ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್  ಉಪಸ್ಥಿತರಿದ್ದರು. ಮೋದಿ  ಹಾಗೂ  ಮ್ಯಾಕ್ರನ್ ನಡುವೆ  ಫಲಪ್ರದ  ಮಾತುಕತೆ ನಡೆದಿದೆ ಎಂದು  ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.

ಪ್ರಾದೇಶಿಕ,  ಅಂತರಾಷ್ಟ್ರೀಯ ಬೆಳವಣಿಗೆಗಳ   ಬಗ್ಗೆ  ಇಬ್ಬರೂ  ನಾಯಕರು  ಅಭಿಪ್ರಾಯ   ಹಂಚಿಕೊಂಡಿದ್ದಾರೆ ಎಂದು ತಿಳಿಸಿದೆ.  ಉಭಯ ದೇಶಗಳ ನಡುವಣ   ಸಂಬಂಧ  ಮತ್ತಷ್ಟು  ಬಲಪಡಿಸಲು   ಮಾತುಕತೆ ಸಹಕಾರಿಯಾಗಲಿದೆ ಎಂದು  ಆಶಯ ವ್ಯಕ್ತಪಡಿಸಿದೆ.      ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಅವರನ್ನು  ಸಹ  ಪ್ರಧಾನಿ ಮೋದಿ  ಭೇಟಿಯಾಗಿದ್ದರು. ಈ  ಸಂದರ್ಭದಲ್ಲಿ   ಉಭಯ ದೇಶಗಳ    ಬಾಂಧವ್ಯವನ್ನು ಪರಾಮರ್ಶಿಸಿದರು.   ಲೂಂಗ್ ಅವರೊಂದಿಗೆ  ಪ್ರಧಾನಿ  ಮೋದಿ ಫಲಪ್ರದ ಮಾತುಕತೆ ನಡೆಸಿದ್ದಾರೆ  ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಟ್ವಿಟರ್‌ನಲ್ಲಿ ತಿಳಿಸಿದೆ.

ಭಾರತೀಯ ಸಮುದಾಯದೊಂದಿಗೆ  ಸಭೆ: ಇಟಲಿಯಲ್ಲಿ  ಹಲವು  ಭಾರತೀಯ ಸಮುದಾಯದ   ಜನರನ್ನು     ಪ್ರಧಾನಿ  ಮೋದಿ  ಭೇಟಿ ಮಾಡಿದರು.   ಈ  ಸಂಬಂಧ  ಫೋಟೋಗಳನ್ನು  ಪ್ರಧಾನಿ  ಮೋದಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Share