Connect with us


      




ದೇಶ

ಪ್ರಧಾನಿ ಮೋದಿಯವರ ಟ್ವಿಟ್ಟರ್ ಖಾತೆ ಹ್ಯಾಕ್!

Iranna Anchatageri

Published

on

ಹೊಸದಿಲ್ಲಿ, ಡಿಸೆಂಬರ್ 12 (ಯು.ಎನ್.ಐ) ಶನಿವಾರ ತಡರಾತ್ರಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿರುವುದು ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿಯ ಟ್ವಿಟ್ಟರ್ ಖಾತೆ ಮೂಲಕ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧಗೊಳಿಸಬೇಕೆಂದು ಹ್ಯಾಕರ್ಸ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಟ್ವೀಟ್‌ನಲ್ಲಿ ಲಿಂಕ್ ಅನ್ನು ಸಹ ಹಂಚಿಕೊಳ್ಳಲಾಗಿದ್ದು, ಅದರ ಮೂಲಕ ಬಿಟ್ ಕಾಯಿನ್ ಅನ್ನು ಉಚಿತವಾಗಿ ಪಡೆಯುವಂತೆ ತಿಳಿಸಲಾಗಿದೆ.

ಈ ಟ್ವೀಟ್ ನೋಡಿ ಟ್ವಿಟ್ಟರ್‌ ಬಳಕೆದಾರರು ಪ್ರಧಾನಿ ಖಾತೆ ಹ್ಯಾಕ್ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಳಿಕ, ಪ್ರಧಾನಿಯವರ ಖಾತೆಗೆ ಕೆಲಕಾಲ ಅನಿಯಂತ್ರಿತಗೊಂಡಿದ್ದು ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ. ಅಲ್ಲದೆ, ಪಿಎಂ ಖಾತೆಯಿಂದ ಮಾಡಿದ ಟ್ವೀಟ್ ಅನ್ನು ನಿರ್ಲಕ್ಷಿಸುವಂತೆ ಸಾರ್ವಜನಿಕರಲ್ಲಿ ಪಿಎಂಒ ಕಚೇರಿ ಮನವಿ ಮಾಡಿಕೊಂಡಿದೆ.

 ಬಿಟ್‌ಕಾಯಿನ್ ಅನ್ನು ಕಾನೂನು ಬದ್ಧಗೊಳಿಸಲು ಟ್ವೀಟ್!

ಪ್ರಧಾನಿ ಮೋದಿಯವರ ಖಾತೆಯಿಂದ 2:14ರ ಸುಮಾರಿಗೆ ಹ್ಯಾಕ್ ಮಾಡಿ ಟ್ವೀಟ್ ಮಾಡಲಾಗಿದೆ. ಅದರಲ್ಲಿ “ಭಾರತವು ಅಂತಿಮವಾಗಿ ಬಿಟ್‌ಕಾಯಿನ್ ಅನ್ನು ಕಾನೂನು ಟೆಂಡರ್ ಆಗಿ ಸ್ವೀಕರಿಸಿದೆ. ಸರ್ಕಾರ ಅಧಿಕೃತವಾಗಿ 500 ಬಿಟ್‌ಕಾಯಿನ್‌ಗಳನ್ನು ಖರೀದಿಸಿದೆ. ಅವುಗಳನ್ನು ದೇಶದ ಎಲ್ಲಾ ನಾಗರಿಕರಿಗೆ ವಿತರಿಸುತ್ತಿದೆ ಅಂತಾ ಟ್ವೀಟ್ ಮಾಡಲಾಗಿದೆ. ಅಲ್ಲದೆ, ಈ ಟ್ವೀಟ್‌ನೊಂದಿಗೆ ಸ್ಕ್ಯಾಮ್ ಲಿಂಕ್ ಅನ್ನು ಸಹ ಹಂಚಿಕೊಳ್ಳಲಾಗಿದೆ.

ಪ್ರಧಾನಿ ಕಾರ್ಯಾಲಯವು ಟ್ವೀಟ್ ಅನ್ನು ತೆಗೆದು ಹಾಕುವಕ್ಕೂ ಮೊದಲು, ಜನರು ಅದರ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡಿದ್ದರು. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಶೇರ್ ಮಾಡಿಕೊಳ್ಳಲಾಗಿದೆ. #Hackers, #Bitcoin ಮತ್ತು #NarendraModi Twitter ಹೆಸರಿನಲ್ಲಿ ಸತತ ಶೇರ್ ಮಾಡಲಾಗುತ್ತಿದ್ದು,  ಟ್ರೆಂಡಿಂಗ್ ಆಗಿವೆ.

ಪ್ರಧಾನಿಯವರ ಟ್ಟಿಟ್ಟರ್ ಅಕೌಂಟ್ ಸೆಪ್ಟೆಂಬರ್ 2020 ರಲ್ಲಿ ಹ್ಯಾಕ್ ಆಗಿತ್ತು

ಪ್ರಧಾನಿ ಮೋದಿಯವರ Twitter ಖಾತೆಯು ಇಂದು ಮೊದಲ ಬಾರಿಗೆ ಹ್ಯಾಕ್ ಆಗಿಲ್ಲ. ಈ ಹಿಂದೆ ಸೆಪ್ಟೆಂಬರ್ 2020 ರಲ್ಲಿ ಪ್ರಧಾನಿಯ ವೈಯಕ್ತಿಕ ವೆಬ್‌ಸೈಟ್‌ಗೆ ಲಿಂಕ್ ಮಾಡಲಾದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.

Share