Connect with us


      
ದೇಶ

ಪ್ರಧಾನಿ ಮೋದಿ ಇಂದು ಉತ್ತರಪ್ರದೇಶ ಭೇಟಿ – ಗೋರಖ್ ಪುರದಲ್ಲಿ 10 ಸಾವಿರ ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ

Iranna Anchatageri

Published

on

ಗೋರಖ್ ಪುರ, ಡಿ 9 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಗೋರಖ್ ಪುರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗ ಚಾಲನೆ ನೀಡಲಿರುವ ಮೋದಿ, ಜನರನ್ನು ಉದ್ದೇಶಿಸಿ ಸಹ ಮಾತನಾಡಲಿದ್ದಾರೆ.

ನರೇಂದ್ರ ಮೋದಿ, ಪ್ರಧಾನಿ

ಈ ಕುರಿತು ಗೋರಖ್ ಪುರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ ಅವರು ಗೋರಖ್ ಪುರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಅಂತಾ ತಿಳಿಸಿದರು. 8,603 ಕೋಟಿ ರೂಪಾಯಿ ವೆಚ್ಚದಲ್ಲಿ ಗೋರಖ್ ಪುರ ರಸಗೊಬ್ಬರ ಕಾರ್ಖಾನೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಪೂರ್ವ ಉತ್ತರ ಪ್ರದೇಶ ಭಾಗದ ಗೋರಖ್ ಪುರದಲ್ಲಿ 1,011 ಕೋಟಿ ರೂಪಾಯಿ ವೆಚ್ಚದಲ್ಲಿ ಎಐಐಎಂಎಸ್ ಹಾಗೂ 36 ಕೋಟಿ ರೂಪಾಯಿ ವೆಚ್ಚದಲ್ಲಿ ಆರ್‌ಎಂಆರ್‌ಸಿಯ ಹೈಟೆಕ್ ಲ್ಯಾಬ್ ಗಳನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ ಅಂತಾ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದರು.

ಈ ವೇಳೆ ಪ್ರತಿಪಕ್ಷಗಳ ನೀತಿಯನ್ನು ಖಂಡಿಸಿದ ಯುಪಿ ಸಿಎಂ, ಹಿಂದಿನ ಸರ್ಕಾರಗಳ ವೈಫಲ್ಯದಿಂದ ಅಸಾಧ್ಯವಾಗಿದ್ದ ಪೂರ್ವ ಉತ್ತರ ಪ್ರದೇಶದ ಕನಸುಗಳನ್ನು ನನಸು ಮಾಡಲು ಪ್ರಧಾನಿ ಮೋದಿ ಗೋರಖ್ ಪುರಕ್ಕೆ ಆಗಮಿಸುತ್ತಿದ್ದಾರೆ. ಕೇಂದ್ರ ಸರ್ಕಾರದ 3 ಯೋಜನೆಗಳು ಪೂರ್ವ ಉತ್ತರ ಪ್ರದೇಶದ ಅಭಿವೃದ್ಧಿಯಾಗಲಿದ್ದು, ಇದು ಈ ಭಾಗದ ಅತಿದೊಡ್ಡ ಹೂಡಿಕೆಯಾಗಿದೆ ಅಂತಾ ತಿಳಿಸಿದರು.

ರಸಗೊಬ್ಬರ ಕಾರ್ಖಾನೆಯಿಂದಾಗಿ 12 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆಯಾಗಲಿದೆ. ಇದರಿಂದ ಉತ್ತರಪ್ರದೇಶ, ಬಿಹಾರ ಹಾಗೂ ನೇಪಾಳಕ್ಕೆ ಈ ಯೋಜನೆಯಿಂದ ಲಾಭ ದೊರೆಯಲಿದೆ. ಕೇಂದ್ರ ಸರ್ಕಾರ 2016ರಲ್ಲಿ ಎಐಐಎಂಎಸ್ ಅನ್ನು ಗೋರಖ್ ಪುರಕ್ಕೆ ನೀಡಿದ್ದರು. ಅದು ಈಗ ಪೂರ್ಣಗೊಂಡಿದೆ. ಈ ಭಾಗದ ಜನರಿಗೆ ತಜ್ಞ ವೈದ್ಯರು ಹಾಗೂ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ. ಇನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ BRD ವೈದ್ಯಕೀಯ ಕಾಲೇಜಿನಲ್ಲಿರುವ RMRC ಪ್ರಾದೇಶಿಕ ಕೇಂದ್ರದಲ್ಲಿ ಹೈಟೆಕ್ ಲ್ಯಾಬ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಎನ್ಸೆಫಾಲಿಟಿಸ್, ಕಾಲಾ ಅಜರ್, ಚಿಕೂನ್‌ಗುನ್ಯಾ, ಡೆಂಗ್ಯೂ ಮತ್ತು ಕರೋನಾವರೆಗಿನ ವೈರಸ್‌ಗಳನ್ನು ಇಲ್ಲಿ ಪರೀಕ್ಷಿಸಲಾಗಲು ಸಾಧ್ಯವಾಗುತ್ತದೆ ಅಂತಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.

Share