Connect with us


      
ಸಿನೆಮಾ

ಗುಟ್ಟಾಗಿ ಮದುವೆಯಾದ ಬಾಲಿವುಡ್ ನಟ ಮೋಹಿತ್ ರೈನಾ

Vanitha Jain

Published

on

ಮುಂಬೈ, ಜನವರಿ 01(ಯು.ಎನ್.ಐ) ಮುಂಬೈ ಡೈರೀಸ್: 26/11′ ನಟ ಮೋಹಿತ್ ರೈನಾ ಜನವರಿ 1 ರಂದು ಗುಟ್ಟಾಗಿ ಮದುವೆಯಾಗಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ನಟ ತನ್ನ ಪತ್ನಿ ಅದಿತಿಯೊಂದಿಗೆ ಮದುವೆಯ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ, ಅದು ಎಲ್ಲಾ ಅಡೆತಡೆಗಳನ್ನು ಮೀರಿ ನಿಲ್ಲುತ್ತದೆ, ಗೋಡೆಗಳನ್ನು ಭೇದಿಸುತ್ತದೆ, ಕೊನೆಗೆ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ, ಭರವಸೆ ತುಂಬಿದೆ. ಆ ಭರವಸೆ ಮತ್ತು ನಮ್ಮ ಹೆತ್ತವರ ಆಶೀರ್ವಾದದಿಂದ ನಾವು ಇನ್ನು ಮುಂದೆ ಇಬ್ಬರಲ್ಲ, ಆದರೆ ಒಂದೇ. ನಿಮ್ಮೆಲ್ಲರ ಪ್ರೀತಿ ಬೇಕು. ಈ ಹೊಸ ಪ್ರಯಾಣದಲ್ಲಿ ಆಶೀರ್ವಾದವಿರಲಿ ಅದಿತಿ ಮತ್ತು ಮೋಹಿತ್ ಎಂದು ಬರೆದು ಮದುವೆಯ ಫೋಟೋ ಹಂಚಿಕೊಂಡಿದ್ದಾರೆ.

ಮೋಹಿತ್ ರೈನಾ, ಅದಿತಿಯೊಂದಿಗೆ ಕಾಶ್ಮೀರಿ ಸಾಂಪ್ರದಾಯದ ಮೂಲಕ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಅದಿತಿ ತನ್ನ ಕಿವಿಗಳಲ್ಲಿ ತರಂಗ್, ಅಥ್ ಮತ್ತು ದೇಜಾಹುರ್ ಎಂಬ ಕಾಶ್ಮೀರಿ ಶಿರಸ್ತ್ರಾಣವನ್ನು ಧರಿಸಿದ್ದರು. ಮತ್ತೊಂದೆಡೆ, ಮೋಹಿತ್ ಕೆನೆ-ಬಿಳಿ ಶೆರ್ವಾನಿ ಮತ್ತು ಗೋರ್ಡ್‍ಸ್ಟಾರ್ ಎಂಬ ಪೇಟ ತೊಟ್ಟು ಸುಂದರವಾಗಿ ಕಾಣುತ್ತಿದ್ದರು.

ಮೃಣಾಲ್ ಠಾಕೂರ್ ಮತ್ತು ದಿಯಾ ಮಿರ್ಜಾ ಸೇರಿದಂತೆ ನಟ ನಟಿಯರು, ಗಣ್ಯರು ವಿವಾಹ ಜೀವನಕ್ಕೆ ಶುಭಾಶಯ ಕೋರಿದ್ದಾರೆ.

Share