Connect with us


      




ರಾಜಕೀಯ

ಹನುಮಾನ್ ಚಾಲೀಸ ಪಠಿಸುವ ವಿವಾದ; ಸಂಸದೆ, ಶಾಸಕ ಅರೆಸ್ಟ್

Lakshmi Vijaya

Published

on

ಮುಂಬೈ: ಏಪ್ರಿಲ್ 24 (ಯು.ಎನ್.ಐ.) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುತ್ತೇವೆಂದು ಸವಾಲು ಹಾಕಿದ್ದ ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರನ್ನು ಶನಿವಾರ ಬಂಧಿಸಲಾಗಿದೆ.

ದಂಪತಿಯ ಮನೆ ಮುಂದೆ ಶಿವಸೇನೆ ಕಾರ್ಯಕರ್ತರ ಪ್ರತಿಭಟನೆಯ ಭಾರೀ ಹೈಡ್ರಾಮಾದ ಬಳಿಕ ದಂಪತಿಯನ್ನ ಉಪನಗರ ಖಾರ್‌ನಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿದೆ.

ಅವರ ವಿರುದ್ಧ ಐಪಿಸಿ ಸೆಕ್ಷನ್ 153 (ಎ) (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು)ಮತ್ತು ಸೆಕ್ಷನ್ 135 ರ ಮುಂಬೈ ಪೊಲೀಸ್ ಕಾಯಿದೆ (ಪೊಲೀಸರ ನಿಷೇಧ ಆದೇಶಗಳ ಉಲ್ಲಂಘನೆ) ಅಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲೀಸ ಪಠಿಸುವುದಾಗಿ ದಂಪತಿ ಸವಾಲು ಹಾಕಿದ್ರು. ಬಳಿಕ ಮಹಾರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತಾವು ತಮ್ಮ ಸವಾಲಿನಿಂದ ಹಿಂದಿ ಸರಿದಿರುವುದಾಗಿ ದಂಪತಿ ಘೋಷಿಸಿದ್ರು. ಆದರೆ ತಮ್ಮ ಯೋಜನೆಯನ್ನ ಯೋಜನೆಯನ್ನು ದಂಪತಿ ರದ್ದುಗೊಳಿಸಿದ ಕೆಲವೇ ಗಂಟೆಗಳ ನಂತರ ಇಬ್ಬರೂ ಬಂಧನಕ್ಕೊಳಗಾಗಿದ್ದಾರೆ.

ನಾಗ್ಪುರದಲ್ಲಿ ಮಾತನಾಡಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, ಶಿವಸೇನೆ ಸರ್ಕಾರದ ಕ್ರಮವನ್ನ ಖಂಡಿಸಿದ್ದು , ಪರಿಸ್ಥಿತಿಯನ್ನ ನಿಭಾಯಿಸಿದ ರೀತಿಯನ್ನ ಬಾಲಿಶತನ ಎಂದು ವಿರೋಧಿಸಿದ್ದಾರೆ.

ಸಂಸದೆ ಮತ್ತು ಶಾಸಕರು ತಮ್ಮ ಯೋಜನೆಯನ್ನ ಕೈ ಬಿಟ್ಟ ಬಳಿಕವೂ ಶಿವಸೇನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ದಂಪತಿ ನಿವಾಸದೆದುರು ಜಮಾಯಿಸಿ ಪ್ರತಿಭಟಿಸಿದರು. ಈ ವೇಳೆ ದೊಡ್ಡ ಹೈಡ್ರಾಮಾವೇ ಸೃಷ್ಟಿಯಾಯಿತು.

ಶಿವಸೇನೆ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಭೇದಿಸಿ ಉಪನಗರ ಖಾರ್‌ನಲ್ಲಿರುವ ಶಾಸಕ ದಂಪತಿಗಳ ನಿವಾಸದ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು ಮತ್ತು ಶಿವಸೇನೆ ಕಾರ್ಯಕರ್ತರನ್ನು ಮುಂದೆ ಹೋಗದಂತೆ ತಡೆದರು.

ಪೊಲೀಸರು ‘ಮಾತೋಶ್ರೀ’ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ ಮತ್ತು ಜನಸಂದಣಿಯನ್ನು ತಪ್ಪಿಸಲು ಠಾಕ್ರೆ ನಿವಾಸಕ್ಕೆ ಹೋಗುವ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.

Share