Connect with us


      




ಕರ್ನಾಟಕ

ದೇಶದ್ರೋಹಿಗಳಿಗೆ ಸರ್ಕಾರದ ಸವಲತ್ತು ಮೊಟಕುಗೊಳಿಸಿ – ರೇಣುಕಾಚಾರ್ಯ ಆಗ್ರಹ

Iranna Anchatageri

Published

on

ದಾವಣಗೆರೆ: ಏಪ್ರಿಲ್ 20 (ಯು.ಎನ್.ಐ.) ಪದೇ ಪದೇ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಿ ಅಶಾಂತಿ ಮೂಡಿಸುತ್ತಿರುವ ದೇಶ ದ್ರೋಹಿಗಳಿಗೆ ಮತದಾನದ ಹಕ್ಕು, ಬಿಪಿಎಲ್ ಪಡಿತರ ಚೀಟಿ ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ಮೊಟಕುಗೊಳಿಸಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ಜಿಲ್ಲೆಯ ನ್ಯಾಮತಿ ತಾಲ್ಲೂಕು ಕುಂಕುವ ಗ್ರಾಮದಲ್ಲಿ ಮಾತನಾಡಿದ ಅವರು, ಇಲ್ಲಿಯ ಅನ್ನ,ಗಾಳಿ, ನೀರು ಸೇವನೆ ಮಾಡಿ ಕೊನೆಗೆ ನಮ್ಮಲ್ಲೇ ವಿದ್ರೋಹಿ ಚಟುವಟಿಕೆಗಳನ್ನು ನಡೆಸುವವರಿಗೆ ಸುಮ್ಮನೆ ಬಿಡಬಾರದು. ಸರ್ಕಾರದ ಸವಲತ್ತುಗಳನ್ನು ಸಂಪೂರ್ಣವಾಗಿ ಹಿಂಪಡೆದಾಗಲೇ ಇವರು ಸರಿದಾರಿಗೆ ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವರಿಗೆ ಅಂತಿಂಥ ಶಿಕ್ಷೆ ನೀಡಿದರೆ ಸರಿಯಾಗುವುದಿಲ್ಲಘಿ. ಕೋಮುಗಲಭೆ ನಡೆಸುವವರನ್ನು ಗಲ್ಲಿಗೆ ಹಾಕಿದಾಗ ಮಾತ್ರ ಮುಂದಿನವರಿಗೆ ಪಾಠವಾಗುತ್ತದೆ. ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗಂಭೀರವಾಗಿ ಪರಿಗಣಿಸಲಿ ಎಂದು ಮನವಿ ಮಾಡಿದರು.

ಕಳೆದ ಶನಿವಾರ ಹಳೇಹುಬ್ಬಳ್ಳಿಯಲ್ಲಿ ನಡೆದಿರುವ ಕೋಮುಗಲಭೆಗೆ ಕಾಂಗ್ರೆಸ್ ನಾಯಕರ ಕುಮ್ಮಕು ಕಾರಣ. ಅಲ್ತಾಪ್ ಹಳ್ಳೂರ ಯಾವ ಪಕ್ಷಕ್ಕೆ ಸೇರಿದವನು ಎಂದು ಅವರು ಪ್ರಶ್ನಿಸಿದರು. ಅಮಾಯಕ ಹುಡುಗನೊಬ್ಬ ವಾಟ್ಸಪ್‍ನಲ್ಲಿ ಬಂದ ಸ್ಟೇಟಸ್‍ನ್ನು ಹಾಕಿದ್ದಕ್ಕೆ ಗಲಭೆ ನಡೆಸುವ ಅವಶ್ಯಕತೆ ಇತ್ತೆ? ಮೌಲ್ವಿ ಮತ್ತು ಅಲ್ತಾಪ್ ಹಳ್ಳೂರ ಸೇರಿಕೊಂಡೇ ಜನರನ್ನುಪ್ರಚೋದಿಸಿದ್ದಾರೆ. ಕೇವಲ ಅರ್ಧಗಂಟೆಯೊಳಗೆ ಮೂರು ಟ್ರಾಕ್ಟರ್ ಲೋಡ್ ಕಲ್ಲುಗಳನ್ನು ಯಾವ ಕಾರಣಕ್ಕೆ ಸಂಗ್ರಹಿಸಲಾಗಿತ್ತು ಎಂದು ಪ್ರಶ್ನಿಸಿದರು.

Share