Connect with us


      




ಕ್ರೀಡೆ

ಪಾಕ್ ಕ್ರಿಕೆಟಿಗನಿಗೆ ತಮ್ಮ ಜೆರ್ಸಿ ಉಡುಗೊರೆಯಾಗಿ ಕೊಟ್ಟ ಧೋನಿ

Vanitha Jain

Published

on

ನವದೆಹಲಿ: ಜನೆವರಿ 07 (ಯು.ಎನ್.ಐ.) ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ದೊಡ್ಡ ಅಭಿಮಾನಿ ಪಾಕಿಸ್ತಾನದ ಕ್ರಿಕೆಟಿಗ ಹ್ಯಾರಿಸ್ ರೌಫ್ ಅವರಿಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಬಗ್ಗೆ ಖುದ್ದಾಗಿ ಹೇಳಿಕೊಂಡಿರುವ ರೌಫ್ ನಾನು ಧೋನಿ ಅವರ ಅಪ್ಪಟ ಅಭಿಮಾನಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ 20 ವಿಶ್ವಕಪ್ ಪಂದ್ಯದ ನಂತರ, ಆರಾಧ್ಯ ದೈವ ಧೋನಿಯನ್ನು ಭೇಟಿಯಾಗಿ ಇಬ್ಬರೂ ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದೆವು.

ಪಾಕಿಸ್ತಾನ ಡಿ ಟಿ20 ಪಂದ್ಯದಲ್ಲಿ 10 ವಿಕೆಟ್‍ಗಳಿಂದ ಗೆದ್ದ ಮೂರು ತಿಂಗಳ ನಂತರ, ಎಂಎಸ್ ಧೋನಿ ಕಳೆದ ವರ್ಷದ ಸಿಎಸ್‍ಕೆ ತಂಡದ ತನ್ನ ಜೆರ್ಸಿ ಉಡುಗೊರೆಯಾಗಿ ಕಳುಹಿಸಿದ್ದರು.

ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಹಂಚಿಕೊಂಡ ರೌಫ್ “ಲೆಜೆಂಡ್ ಮತ್ತು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ನನಗೆ ಸುಂದರವಾದ ಉಡುಗೊರೆಯಾದ ಜೆರ್ಸಿ ಅನ್ನು ಕಳುಹಿಸಿ ಗೌರವಿಸಿದ್ದಾರೆ. “7” ಇನ್ನೂ ಈ ಸದ್ಭಾವನೆಯ ಸನ್ನೆಗಳ ಮೂಲಕ ಹೃದಯಗಳನ್ನು ಗೆಲ್ಲುತ್ತಿದ್ದಾರೆ ಎಂದು ಹೇಳಿದ ಅವರು ಉಡುಗೊರೆಯನ್ನು ರವಾನಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ ಸಿಎಸ್‍ಕೆ ತಂಡದ ಮ್ಯಾನೇಜರ್ ರಸೆಲ್ ಅವರಿಗೆ ರೌಫ್ ಧನ್ಯವಾದ ಅರ್ಪಿಸಿದರು.

ಭಾರತೀಯನೊಬ್ಬ ಪಾಕಿಸ್ತಾನಿ ಕ್ರಿಕೆಟಿಗನಿಗೆ ಉಡುಗೊರೆ ನೀಡುತ್ತಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ, ಮೊಹಮ್ಮದ್ ಅಮೀರ್ ತನ್ನ ಐದು ವರ್ಷಗಳ ನಿμÉೀಧವನ್ನು ಪೂರೈಸಿದ ನಂತರ, ವಿರಾಟ್ ಕೊಹ್ಲಿ ಏಷ್ಯಾಕಪ್‍ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಮೊದಲು ಅವರಿಗೆ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಅಲ್ಲದೆ, ಶಾಹಿದ್ ಅಫ್ರಿದಿ ನಿವೃತ್ತಿಯಾದಾಗ, ಭಾರತೀಯ ಕ್ರಿಕೆಟ್ ತಂಡವು ಗೌರವ ಸೂಚಕವಾಗಿ ಪಾಕಿಸ್ತಾನದ ಮಾಜಿ ನಾಯಕನಿಗೆ ಸಹಿ ಮಾಡಿದ ಜೆರ್ಸಿಯನ್ನು ಕಳುಹಿಸಿತ್ತು.

Share