Connect with us


      
ಕ್ರೀಡೆ

IPL 2022; ಟೂರ್ನಿಯಿಂದ ಹೊರಗುಳಿದ ಗಾಯಾಳು ಸೂರ್ಯಕುಮಾರ್ ಯಾದವ್

Lakshmi Vijaya

Published

on

ಮುಂಬೈ: ಮೇ 09 (ಯು.ಎನ್.ಐ.) ಈ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರೋ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಏಕೆಂದರೆ ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಗಾಯದಿಂದ ಸೀಸನ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಮೇ 6 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಅವರ ಎಡ ಮುಂದೋಳಿಗೆ ಗಾಯವಾಗಿತ್ತು.

“ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಎಡ ಮುಂದೋಳಿನ ಸ್ನಾಯುವಿನ ಗಾಯದಿಂದಾಗಿ ಐಪಿಎಲ್ 2022 ರಿಂದ ಹೊರಗುಳಿದಿದ್ದಾರೆ. 2022 ರ ಮೇ 6 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ತಂಡದ ಪಂದ್ಯದ ವೇಳೆ ಶ್ರೀ ಯಾದವ್ ಗಾಯಗೊಂಡಿದ್ದಾರೆ” ಎಂದು ಫ್ರಾಂಟೈಸಿ ಟೀಂ ಅಧಿಕೃತವಾಗಿ ಸೋಮವಾರ ತಿಳಿಸಿದೆ.

ಸೂರ್ಯಕುಮಾರ್ ಈ ಋತುವಿನಲ್ಲಿ 8 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್‌ಗಾಗಿ ಆಡಿ 43.29 ಸರಾಸರಿಯಲ್ಲಿ 303 ರನ್ ಗಳಿಸಿದರು. ಇದರಲ್ಲಿ 3 ಅರ್ಧ ಶತಕಗಳು ಸೇರಿವೆ.

ಐಪಿಎಲ್ ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅತ್ಯಂತ ಸ್ಥಿರ ಪ್ರದರ್ಶನಕಾರರಲ್ಲಿ ಒಬ್ಬರಾಗಿದ್ದರು. ಅವರ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ಕೇವಲ ಎರಡು ಮ್ಯಾಚ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ ಪ್ಲೇ-ಆಫ್ ರೇಸ್‌ನಿಂದ ಹೊರಗುಳಿದಿದೆ.

Share