Published
5 months agoon
By
UNI Kannadaಮುಂಬೈ,ಡಿ.13(ಯು.ಎನ್.ಐ) ಡಿಸೆಂಬರ್ 13 ರ ಸೋಮವಾರ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಕುಸಿತ ಕಂಡುಬಂದಿದೆ.
ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ಸೆನ್ಸೆಕ್ಸ್ 503.25 ಪಾಯಿಂಟ್ ಅಥವಾ ಶೇ.0.86 ರಷ್ಟು ಕುಸಿದು 58,283.42 ಕ್ಕೆ ತಲುಪಿದೆ. ಇದೇ ವೇಳೆ ರಾಷ್ಟ್ರೀಯ ಷೇರು ವಿನಿಯಮ ಕೇಂದ್ರದ(ಎನ್ಎಸ್ಇ)ನಿಫ್ಟಿ ಕೂಡ ಸೋಮವಾರ 143.00 ಪಾಯಿಂಟ್ ಅಥವಾ ಶೆ.0.82 ರಷ್ಟು ಇಳಿಕೆಯೊಂದಿಗೆ 17,368.30 ಮಟ್ಟದಲ್ಲಿ ಕೊನೆಗೊಂಡಿತು.
ಅಲ್ಲದೇ ಸೋಮವಾರ ಷೇರುಪೇಟೆಯಲ್ಲಿ ಬ್ಯಾಂಕ್ ಮತ್ತು ಆಟೋ ವಲಯದ ಷೇರುಗಳಲ್ಲಿಯೂ ಕುಸಿತ ಕಂಡುಬಂದಿದೆ. ನಿಫ್ಟಿ ಬ್ಯಾಂಕ್ ಮತ್ತು ಆಟೋ ಷೇರುಗಳು ಕೂಡ ಕುಸಿತ ದಾಖಲಿಸಿವೆ. ನಿಫ್ಟಿ ಬ್ಯಾಂಕ್ 180.40 ಅಂಕಗಳ ಕುಸಿತದೊಂದಿಗೆ 36,925.30ಕ್ಕೆ ಕೊನೆಗೊಂಡಿತು. ನಿಫ್ಟಿ ಆಟೋ ಶೇ.0.30 ಅಥವಾ 32.85 ಪಾಯಿಂಟ್ ಗಳ ಅಲ್ಪ ಇಳಿಕೆಯನ್ನು ದಾಖಲಿಸಿ 11047.20 ಮಟ್ಟದಲ್ಲಿ ಕೊನೆಗೊಂಡಿತು.
ಅದೇ ಸಮಯದಲ್ಲಿ ನಿಫ್ಟಿ ಐಟಿ 111.00 ಅಂಕಗಳ ಜಿಗಿತದೊಂದಿಗೆ 36050.60 ಮಟ್ಟವನ್ನು ತಲುಪಿತು.ಅದೇ ಸಮಯದಲ್ಲಿ ಬಿ ಎಸ್ಇ ಸ್ಮಾಲ್ ಕ್ಯಾಪ್ ನಲ್ಲಿ ಬುಲಿಶ್ ಟ್ರೆಂಡ್ ಕಂಡುಬಂದಿದೆ. ಇದು ಶೇ.0.24 ಅಥವಾ 71.38 ಪಾಯಿಂಟ್ಗಳ ಏರಿಕೆಯೊಂದಿಗೆ 29,332.19ಕ್ಕೆ ಕೊನೆಗೊಂಡರೆ, ಬಿಎಸ್ಇ ಮಿಡ್ ಕ್ಯಾಪ್ ಶೇ.0.53 ಕಡಿಮೆಯಾಗಿ 25,571.64 ಪಾಯಿಂಟ್ಗಳಿಗೆ ಕೊನೆಗೊಂಡಿತು.
ಟ್ವಿಟ್ಟರ್ ಖರೀದಿ ಒಪ್ಪಂದ ತಾತ್ಕಾಲಿಕವಾಗಿ ತಡೆಹಿಡಿದ ಎಲೋನ್ ಮಸ್ಕ್!
ಅಮೆಜಾನ್ ; ಗ್ರಾಹಕರ ದೂರುಗಳಿಗೆ ತುರ್ತು ಸ್ಪಂದಿಸಲು ಕೇಂದ್ರ ಸೂಚನೆ
1000ಕ್ಕೂ ಹೆಚ್ಚು ಶಾಖೆ ತೆರೆದ ಎಚ್ಡಿಎಫ್ಸಿ..!
ಸ್ವಿಗ್ಗಿ; ಡ್ರೋನ್ ಮೂಲಕ ದಿನಸಿ ವಿತರಣಾ ಸೇವೆಗೆ ಸಿದ್ಧ
ಬೆಂಗಳೂರಿಗರಿಗೆ ಸಿಗಲಿದೆ ಶೀಘ್ರ ಡ್ರೋನ್ ಮೂಲಕ ಆಹಾರ!
61,000 ಕೋಟಿ ರೂ. ಮೊತ್ತದ ಇಒಐ ನಿರೀಕ್ಷೆ, 12,000 ಉದ್ಯೋಗ ಸೃಷ್ಟಿ