Connect with us


      




ಕ್ರೀಡೆ

ಮುಂಬೈ ಟೆಸ್ಟ್ ; ನ್ಯೂಜಿಲೆಂಡ್ ವಿರುದ್ಧ ಅತಿದೊಡ್ಡ ಗೆಲುವು – ಕಿವೀಸ್ ಪಡೆಯನ್ನು 372 ರನ್ ಗಳಿಂದ ಸೋಲಿಸಿದ ಟೀಮ್ ಇಂಡಿಯಾ

Iranna Anchatageri

Published

on

ಮುಂಬೈ, ಡಿ 6 (ಯುಎನ್ಐ) ಮುಂಬೈನಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 372 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಭಾರತವು ನ್ಯೂಜಿಲೆಂಡ್ ಎದುರು 540 ರನ್‌ಗಳ ಗುರಿಯನ್ನು ನೀಡಿತ್ತು, ಆದರೆ ಕಿವೀಸ್ ತಂಡವು ಕೇವಲ 167 ರನ್ ಗಳಿಸಲಷ್ಟೇ ಶಕ್ತವಾಗಿ ಪಂದ್ಯವನ್ನು ಬೃಹತ್ ಅಂತರದಿಂದ ಸೋಲೊಪ್ಪಿಕೊಂಡಿತು. ಇದು ಟೆಸ್ಟ್ ಕ್ರಿಕೆಟ್‌ನ ರನ್‌ಗಳ ವಿಚಾರದಲ್ಲಿ ಭಾರತದ ಅತಿದೊಡ್ಡ ಗೆಲುವಾಗಿದೆ.
ಮುಖ್ಯಾಂಶಗಳು

  • ಟೆಸ್ಟ್ ನಾಯಕನಾಗಿ ವಿರಾಟ್ ಕೊಹ್ಲಿಗೆ ಇದು 39 ನೇ ಜಯ
  • ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಸತತ ಮೂರನೇ ಗೆಲುವು
  • ಭಾರತದ ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಳೆದ 8 ಪಂದ್ಯಗಳಲ್ಲಿ ಟೀಂ ಇಂಡಿಯಾದ 7ನೇ ಗೆಲುವು
  • ನಾಯಕನಾಗಿ ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊಹ್ಲಿಯ ಸತತ ನಾಲ್ಕನೇ ಗೆಲುವು
  • ಇದು ತವರು ನೆಲದಲ್ಲಿ ಭಾರತಕ್ಕೆ ಸತತ 14ನೇ ಸರಣಿ ಜಯವಾಗಿದೆ

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಜಯಂತ್
ನ್ಯೂಜಿಲೆಂಡ್ ನಾಲ್ಕನೇ ದಿನದಾಟ ತುಂಬಾನೇ ಕಳಪೆಯೊಂದಿಗೆ ಆರಂಭ ಕಂಡಿತು. ಭಾರತೀಯ ಬೌಲರ್ ಜಯಂತ್ ಯಾದವ್ ರಚಿನ್ ರವೀಂದ್ರ (18) ವಿಕೆಟ್ ಪಡೆದು ಟೀಮ್ ಇಂಡಿಯಾಕ್ಕೆ ಆರನೇ ಯಶಸ್ಸನ್ನು ಗಿಟ್ಟಿಸಿ ಕೊಟ್ಟರು. ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕಿವೀಸ್ ತಂಡವನ್ನು ಸೋಲಿನಿಂದ ರಕ್ಷಿಸಿದ ರಚಿನ್ ರವೀಂದ್ರ, ಪಂದ್ಯವನ್ನು ಡ್ರಾ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಮುಂಬೈ ಟೆಸ್ಟ್ ನಲ್ಲಿ ರವೀಂದ್ರ ಮತ್ತು ಹೆನ್ರಿ ನಿಕೋಲ್ಸ್ ಆರನೇ ವಿಕೆಟ್‌ಗೆ 90 ಎಸೆತಗಳಲ್ಲಿ 33 ರನ್ ಕಲೆ ಹಾಕಿದರು.
ಜಯಂತ್ ತಮ್ಮ ಮುಂದಿನ ಓವರ್‌ನಲ್ಲಿ ಕೈಲ್ ಜೇಮಿಸನ್ (0) ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವುದರ ಮೂಲಕ ಭಾರತಕ್ಕೆ 7ನೇ ವಿಕೆಟ್ ತಂದುಕೊಟ್ಟರು. ಅದೇ ಓವರ್‌ನಲ್ಲಿ ಟಿಮ್ ಸೌಥಿ (0) ಅವರನ್ನು ಯಾದವ್ ಬೌಲ್ಡ್ ಮಾಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ವಿಲ್ ಸೋಮರ್‌ವಿಲ್ಲೆ (0) ಅವರನ್ನು ಔಟ್ ಮಾಡುವ ಮೂಲಕ ಜಯಂತ್ ಅವರ ನಾಲ್ಕನೇ ಮತ್ತು ನ್ಯೂಜಿಲೆಂಡ್‌ನ 9 ನೇ ವಿಕೆಟ್ ಪಡೆದರು. ಜಯಂತ್ ಯಾದವ್ 49 ರನ್ ನೀಡಿ 4 ವಿಕೆಟ್ ಪಡೆದು, ಅದ್ಭುತ ಬೌಲಿಂಗ್ ಪ್ರದರ್ಶಿಸಿದರು.
ತವರಿನಲ್ಲಿ 300 ವಿಕೆಟ್ ಪಡೆದ ಅಶ್ವಿನ್
ಹೆನ್ರಿ ನಿಕೋಲ್ಸ್ (44) ಔಟಾಗುವುದರೊಂದಿಗೆ, ಆರ್ ಅಶ್ವಿನ್ ಕೂಡ ಭಾರತದ ನೆಲದಲ್ಲಿ 300 ವಿಕೆಟ್ ಪೂರೈಸಿದರು. ಅಶ್ವಿನ್ ತವರಿನಲ್ಲಿ 300 ಟೆಸ್ಟ್ ವಿಕೆಟ್ ಪಡೆದ ಭಾರತದ ಎರಡನೇ ಮತ್ತು ಆರನೇ ಬೌಲರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಟೀಂ ಇಂಡಿಯಾ 276/7 ಸ್ಕೋರ್ ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ 150 ರನ್ ಗಳಿಸಿದ್ದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (62) ಎರಡನೇ ಇನ್ನಿಂಗ್ಸ್‌ನಲ್ಲೂ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇದರೊಂದಿಗೆ ಚೇತೇಶ್ವರ ಪೂಜಾರ (47) ಮತ್ತು ಶುಭಮನ್ ಗಿಲ್ (47) ಕೂಡ ಉತ್ತಮ ಸ್ಕೋರ್ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದ ಎಜಾಜ್ ಪಟೇಲ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ 4 ವಿಕೆಟ್ ಪಡೆದರು.

Share