Connect with us


      
ಸಿನೆಮಾ

ನನ್ನ ಮನೆ ಕೊರೋನಾ ಹಾಟ್ ಸ್ಪಾಟ್ ಅಲ್ಲ; ಮಾಧ್ಯಮದವರ ಮೇಲೆ ಕರಣ್ ಜೋಹರ್ ಗರಂ

Vanitha Jain

Published

on

ಮುಂಬೈ, ಡಿಸೆಂಬರ್ 15(ಯು.ಎನ್.ಐ) ನನ್ನ ಮನೆ ಕೊರೋನಾ ಹಾಟ್ ಸ್ಪಾಟ್ ಅಲ್ಲ, ನಾನು ಕೇವಲ 8 ಮಂದಿಗೆ ಮಾತ್ರ ಔತಣಕ್ಕೆ ಕರೆದಿದ್ದೆ ಎಂದು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಗರಂ ಆಗಿದ್ದಾರೆ.

ಡಿಸೆಂಬರ್ 8 ರಂದು ಕರಣ್ ಜೋಹರ್ ತಮ್ಮ ಮನೆಯಲ್ಲಿ ಔತಣ ಕೂಟ ಏರ್ಪಡಿಸಿ ಕರೀನಾ ಕಪೂರ್ ಖಾನ್, ಅಮೃತಾ ಅರೋರಾ, ಸೀಮಾ ಖಾನ್ ಮತ್ತು ಮಹೀಪ್ ಕಪೂರ್ ಸೇರಿದಂತೆ 8 ಮಂದಿಗೆ ಆಹ್ವಾನವಿತ್ತಿದ್ದರು. ಇದರಲ್ಲಿ ಈ ನಾಲ್ವರಿಗೆ ಕೊರೋನಾ ದೃಢಪಟ್ಟಿದೆ. ಈ ಕಾರಣ ಕರಣ್ ಜೋಹರ್ ಕೂಡ ಕೋವಿಡ್ ಪರೀಕ್ಷೆಗೆ ಒಳಪಟ್ಟಾಗ ವರದಿ ನೆಗೆಟಿವ್ ಬಂದಿದೆ.

ತದನಂತರ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿ, ನಾನು ಸೇರಿದಂತೆ ನನ್ನ ಕುಟುಂಬ ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಿಸಿದ್ದೇವೆ. ಎಲ್ಲರಿಗೂ ನೆಗೆಟಿವ್ ಬಂದಿದೆ. ನಾನು ಕೂಡ ಎರಡು ಬಾರಿ ಪರೀಕ್ಷೆ ಮಾಡಿಸಿದ್ದೇನೆ. ನೆಗೆಟಿವ್ ಕಂಡು ಬಂದಿದೆ. ನಾಗರೀಕರ ಸುರಕ್ಷತೆಗಾಇ ಬಿಎಂಸಿ ಅನುಸರಿಸುತ್ತಿರುವ ಕಟ್ಟುನಿಟ್ಟಿನ ಕ್ರಮಗಳು ನಿಜಕ್ಕೂ ಶ್ಲಾಘನೀಯ. ಇದಕ್ಕೆ ನನ್ನ ವಂದನೆಗಳು. ಇನ್ನು ಮಾಧ್ಯಮದ ಕೆಲವು ಜನರಿಗೆ ನಾನು ಏರ್ಪಡಿಸಿದ್ದ ಆತ್ಮೀಯ ಕೂಟದಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸಿದ್ದೆ. ನಾನು ಯಾವುದೇ ಪಾರ್ಟಿ ಮಾಡಿರಲಿಲ್ಲ. ಔತಣ ಕೂಟ ಮಾತ್ರ ಏರ್ಪಡಿಸಿದ್ದೆ. ಅದುವೇ 8 ಮಂದಿಯನ್ನು ಮಾತ್ರ ಆಹ್ವಾನಿಸಿದ್ದೆ. ನನ್ನ ಮನೆ ಕೋವಿಡ್ ಹಾಟ್‍ಸ್ಪಾಟ್ ಅಲ್ಲ ಎಂದಿದ್ದಾರೆ.

ಇನ್ನು ಮುಂದುವರೆದು ನಾವು ಕೂಡ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇವೆ. ಎಲ್ಲರೂ ಮಾಸ್ಕ್‍ಗಳನ್ನು ಧರಿಸಿದ್ದೆವು. ಕೋವಿಡ್ ಅನ್ನು ನಿರ್ಲಕ್ಷಿಸಿಲ್ಲ. ಇನ್ನು ಕೆಲವಯ ಮಾಧ್ಯಮಮಿತ್ರರು ತಮ್ಮ ವರದಿ ಸಲ್ಲಿಸುವ ವೇಳೆ ಯಾವುದೇ ವಾಶ್ತವಾಂಶ ತಿಳಿದು ವರದಿ ಮಾಡುವುದಲ್ಲದೇ ಸಂಯಮ ಕಾಯ್ದುಕೊಳ್ಳಬೇಕು ಎಂದು ವಿನಂತಿಸಿದ್ದಾರೆ.

Share