Published
7 months agoon
ಪುಣೆ: ನ. 4 (ಯುಎನ್ಐ) ಹಲವಾರು ಪ್ರಸಿದ್ಧ ಪತ್ತೇದಾರಿ ಕಾದಂಬರಿಗಳು ಸೇರಿದಂತೆ 1,200ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದ, ಖ್ಯಾತ ಮರಾಠಿ ಕಥೆಗಾರ ಗುರುನಾಥ್ ನಾಯ್ಕ್ ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಗುರುವಾರ ತಿಳಿಸಿವೆ.
ಗೋವಾ ಮೂಲದ ನಾಯ್ಕ್ ಬುಧವಾರ ಸಂಜೆ ಪುಣೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ. ಅವರು 16 ವರ್ಷಗಳ ಹಿಂದೆ ಮೆದುಳಿನ ಪಾರ್ಶ್ವವಾಯುವಿಗೆ ಒಳಗಾಗಿದ್ದರು ಮತ್ತು ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದರು.
1970 ರಿಂದ 1982 ರ ಅವಧಿಯಲ್ಲಿ ನಾಯ್ಕ್ 700ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದಿದ್ದು, ಅವರ ಕೃತಿಗಳಲ್ಲಿ ಹಲವಾರು ಕಾಲ್ಪನಿಕ ನಿಗೂಢ ಪಾತ್ರಗಳು ಇರುತ್ತಿದ್ದವು. ಅವರ ಕೆಲವು ಜನಪ್ರಿಯ ಪುಸ್ತಕಗಳಲ್ಲಿ ‘ಜಹಾರಿ ಪೇ’, ‘ಕ್ಯಾಬರೆ ಡ್ಯಾನ್ಸರ್’, ‘ಮಹಾಮಾನವ್’, ‘ರಕ್ತಚಾ ಪೌಸ್’ ಸೇರಿವೆ.
ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ತಮ್ಮ ಹಲವಾರು ಕಥೆಗಳನ್ನು ವಾಚನ ಮಾಡಿದ್ದರು. ನಾಯಕ್ ಅವರು ಲಾತೂರ್ನಲ್ಲಿ ಮರಾಠಿ ದಿನಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.