Connect with us


      
ದೇಶ

ಎರಡನೇ ಬಾರಿಗೆ ಸಿಎಂ ಎನ್.ಬಿರೇನ್ ಪ್ರಮಾಣ ವಚನ ಸ್ವೀಕಾರ

UNI Kannada

Published

on

ಮಣಿಪುರ : ಮಾರ್ಚ್ 21 (ಯು.ಎನ್.ಐ.) 2 ನೇ ಬಾರಿಗೆ ಮಣಿಪುರ ಸಿಎಂ ಆಗಿ ಎನ್. ಬಿರೇನ್ ಪ್ರಮಾಣವಚನ ಸ್ವೀಕರಿಸಿದ್ದಾರೆ.  ರಾಜಭವನದಲ್ಲಿ ಜರುಗಿದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ ಗಣೇಸನ್ ಪ್ರತಿಜ್ಞಾವಿಧಿ ಬೋಧಿಸಿದರು. ಉಳಿದಂತೆ ಐವರು ಶಾಸಕರು ಸಚಿವರಾಗಿ ಸಂಪುಟ ಸೇರಿದರು.

ಭಾನುವಾರ ಎನ್ . ಬಿರೇನ್ ನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಬಿರೇನ್ ಸತತ 2 ನೇ ಬಾರಿಗೆ‌ ಮಣಿಪುರ ಮುಖ್ಯಮಂತ್ರಿ ಆದ ಹೆಗ್ಗಳಿಕೆ ಪಡೆದಿದ್ದಾರೆ. ಟಿ.ಹೆಚ್. ಬಿಸ್ವಜಿತ್ , ವೈ.ಕೇಮಚಂದ್, ಕೆ.ಗೋವಿಂದಾಸ್, ನೇಮ್ ಚಕಿತ್ ಜೆನ್ ಮತ್ತು ಎನ್ ಪಿಎಫ್ ನ ಅವಾಂಗ್ ಬೋ ನ್ಯೂಮೈ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಗೋವಿಂದ್ ದಾಸ್ ಹೊರತುಪಡಿಸಿ ಉಳಿದವರೆಲ್ಲ ಹಿಂದಿನ ಸರ್ಕಾರದಲ್ಲಿ ಸದಸ್ಯರಾಗಿದ್ರು.

ಮುಖ್ಯಮಂತ್ರಿ ರೇಸ್ ನಲ್ಲಿ ಎನ್. ಬಿರೇನ್ ಮತ್ತು ಬಿಸ್ವಜಿತ್ ನಡುವೆ ಭಾರೀ ಸ್ಫರ್ಧೆಯಿತ್ತು. ಇಬ್ಬರ ನಡುವಿನ  ಸ್ಫರ್ಧೆ ಮಧ್ಯೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಿರಣ್ ರಿಜಿಜುರನ್ನ ವೀಕ್ಷಕರಾಗಿ ನೇಮಿಸಲಾಗಿತ್ತು. ಒಟ್ಟು 60 ಸ್ಥಾನಗಳಲ್ಲಿ 32 ಸ್ಥಾನಗಳ ಸ್ಪಷ್ಟ ಬಹುಮತವನ್ನ ಬಿಜೆಪಿ ಪಡೆದಿದೆ.

Share