Connect with us


      
ರಾಜಕೀಯ

ಪಂಜಾಬ್ ಕಾಂಗ್ರೆಸ್ ಸರ್ಕಾರ ವಜಾ ಮಾಡಲು ಕಟೀಲ್ ಆಗ್ರಹ

UNI Kannada

Published

on

ಮೋದಿ ಭದ್ರತಾ ವೈಫಲ್ಯ ಉದ್ದೇಶಪೂರ್ವಕವಾದ ರಾಜಕೀಯದ ದುರುದ್ದೇಶದ ಕ್ರಮ

ಬೆಂಗಳೂರು,ಜನವರಿ 04(ಯು.ಎನ್.ಐ) ನರೇಂದ್ರ ಮೋದಿಯವರ ಭದ್ರತೆಯ ವಿಚಾರದಲ್ಲಿ ವಿಫಲತೆಗೆ  ಕಾರಣವಾಗಿರುವ ಪಂಜಾಬ್ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಮೋದಿ ಭದ್ರತಾ ವೈಫಲ್ಯ ಉದ್ದೇಶಪೂರ್ವಕವಾದ ರಾಜಕೀಯದ ದುರುದ್ದೇಶದ ಕ್ರಮ. ನರೇಂದ್ರ ಮೋದಿ ಪ್ರಾಣಕ್ಕೆ ಸಂಚಕಾರ ತರುವಂತೆ ವರ್ತಿಸಿದ ಪಂಜಾಬ್ ಸರ್ಕಾರವನ್ನು ಈ ಕೂಡಲೇ ವಜಾ ಮಾಡಿ ಅಲ್ಲಿನ ಮುಖ್ಯಮಂತ್ರಿಗಳನ್ನು ತಕ್ಷಣವೇ ಬಂಧಿಸಬೇಕೆಂದಿದ್ದಾರೆ. ಕಾಂಗ್ರೆಸ್ಸಿನ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿ  ಆತಂಕದ ವಾತಾವರಣವನ್ನು ನಿರ್ಮಿಸಿದೆ. ಇದು ಅತ್ಯಂತ ಕೀಳುಮಟ್ಟದ ರಾಜಕೀಯ ಪ್ರದರ್ಶನವಾಗಿದೆ. ಪಂಜಾಬಿನ ಕಾಂಗ್ರೆಸ್ ಸರ್ಕಾರವು ಈ ಮೂಲಕ ತನ್ನ ಕೀಳುಮಟ್ಟದ ರಾಜಕೀಯವನ್ನು ಅನಾವರಣಗೊಳಿಸಿದೆ ಎಂದು ಕಟೀಲ್ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಒಂದು ರಾಜ್ಯಕ್ಕೆ ಭೇಟಿ ನೀಡಿದಾಗ ಅವರ ರಕ್ಷಣೆಯ ಹೊಣೆ ಅದೇ ರಾಜ್ಯಕ್ಕೆ ಸೇರುತ್ತದೆ. ಆದರೆ, ಪಂಜಾಬಿನ ಕಾಂಗ್ರೆಸ್ ಸರ್ಕಾರವು ಹೊಣೆಗೇಡಿಯಾಗಿ ವರ್ತಿಸಿದೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡ ಅಲ್ಲಿನ ಕಾಂಗ್ರೆಸ್ ಸರ್ಕಾರವು ದೇಶದ ರೈತರು ಪ್ರಧಾನಿಯವರ ವಿರುದ್ಧ ಇದ್ದಾರೆಂಬ ತೋರಿಸಲು ಈ ರೀತಿಯ ಪಿತೂರಿಯ ಕಾರ್ಯ ಮಾಡಿತ್ತು. ನಿಜಕ್ಕೂ ಇದು ಬಹಳ ಗಂಭೀರ ಸ್ವರೂಪದ್ದಾಗಿದ್ದು ಖಂಡನೀಯ ಎಂದಿದ್ದಾರೆ.

Share