Connect with us


      
ವಿದೇಶ

ತೈವಾನ್‌ದಿಂದ ದಕ್ಷಿಣ ಕೊರಿಯಾಕ್ಕೆ ತೆರಳಿದ ನ್ಯಾನ್ಸಿ ಪೆಲೋಸಿ

Iranna Anchatageri

Published

on

ತೈಪೆ: ಆಗಸ್ಟ್ 03 (ಯು.ಎನ್.ಐ.) ಅಮೆರಿಕ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯನ್ನು ಮುಗಿಸಿಕೊಂಡು ದಕ್ಷಿಣ ಕೊರಿಯಾಕ್ಕೆ ತೆರಳಿದ್ದಾರೆ. ದಕ್ಷಿಣ ಕೊರಿಯಾದತ್ತ ತೆರಳಿದ ಬಳಿಕ, ಚೀನಾ ಮತ್ತೊಮ್ಮೆ ಅಮೆರಿಕದ ಮೇಲೆ ಕಿಡಿಕಾರಿದೆ. ತೈವಾನ್ ಜಲಸಂಧಿ ಬಳಿ ಮಿಲಿಟರಿ ವ್ಯಾಯಾಮ ಬಹಳ ಮುಖ್ಯ ಎಂದು ಚೀನಾ ಹೇಳಿಕೆಯಲ್ಲಿ ತಿಳಿಸಿದೆ. ಪೆಲೋಸಿ ತೈವಾನ್ ಗೆ ಆಗಮಿಸಿದ ತಕ್ಷಣ, ಚೀನಾ ಆಕ್ರೋಶಗೊಂಡಿತ್ತು. ತೈವಾನ್ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿ, ತೈವಾನ್ ನ ನೈಋತ್ಯ ಭಾಗದಲ್ಲಿ 21 ಸೇನಾ ವಿಮಾನಗಳನ್ನು ಹಾರಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿತ್ತು. ಅಲ್ಲದೆ, ನ್ಯಾನ್ಸಿ ಭೇಟಿ ಬಳಿಕ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಚೀನಾ ಇಲ್ಲಿಯವರೆಗೆ ಏನು ಮಾಡಿದೆ?
ಚೀನಾದ ಪ್ರತಿಭಟನೆಯ ನಡುವೆಯೂ ಯುಎಸ್ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ತೈವಾನ್ ರಾಜಧಾನಿ ತೈಪೆಗೆ ಆಗಮಿಸಿದ್ದರು. 25 ವರ್ಷಗಳಲ್ಲಿ ಅಮೆರಿಕದ ಸ್ಪೀಕರೊಬ್ಬರು ತೈವಾನ್ ಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದರು. ಈ ಹಿಂದೆ 1997ರಲ್ಲಿ ಅಂದಿನ ಸ್ಪೀಕರ್ ನ್ಯೂಟ್ ಗಿಂಗ್ರಿಚ್ ಇಲ್ಲಿಗೆ ಆಗಮಿಸಿದ್ದರು. ಪೆಲೋಸಿಯ ಭೇಟಿಯಿಂದ ದಿಗ್ಭ್ರಮೆಗೊಂಡ ಚೀನಾ, ತೈವಾನ್ ವಿರುದ್ಧ ಬೆದರಿಕೆ ತಂತ್ರಗಳನ್ನು ಅನುಸರಿಸಿತ್ತು. ಒನ್ ಚೀನಾ ಪಾಲಿಸಿಯನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಡ್ರ್ಯಾಗನ್ ರಾಷ್ಟ್ರ ಆರೋಪಿಸಿತ್ತು.

ಚೀನಾ ಮತ್ತು ತೈವಾನ್ ನಡುವಿನ ವಿವಾದವೇನು?
ಆಗ್ನೇಯ ಚೀನಾದ ಕರಾವಳಿಯಿಂದ ಸುಮಾರು 100 ಮೈಲುಗಳಷ್ಟು ದೂರದಲ್ಲಿರುವ ತೈವಾನ್ ಒಂದು ದ್ವೀಪ. ತೈವಾನ್ ತನ್ನನ್ನು ಸಾರ್ವಭೌಮ ರಾಷ್ಟ್ರವೆಂದು ಹೇಳಿಕೊಳ್ಳುತ್ತದೆ. ಇದಕ್ಕೆ ತನ್ನದೇ ಆದ ಸಂವಿಧಾನವಿದೆ. ಜನರಿಂದ ಆಯ್ಕೆಯಾದ ಸದಸ್ಯರು ಆಡಳಿತ ನಡೆಸುತ್ತಾರೆ ಎಂದು ತೈವಾನ್ ಪ್ರತಿಪಾದಿಸುತ್ತದೆ. ಆದರೆ ಚೀನಾದ ಕಮ್ಯುನಿಸ್ಟ್ ಸರ್ಕಾರ, ತೈವಾನ್ ಅನ್ನು ತನ್ನ ದೇಶದ ಭಾಗವೆಂದು ಹೇಳಿಕೊಳ್ಳುತ್ತದೆ. ಐತಿಹಾಸಿಕ ದೃಷ್ಟಿಯಿಂದ ನೋಡೋದಾದ್ರೆ ತೈವಾನ್ ಒಂದು ಕಾಲದಲ್ಲಿ ಚೀನಾದ ಭಾಗವಾಗಿತ್ತು.

Continue Reading
Click to comment

Leave a Reply

Your email address will not be published.

Share