Published
2 weeks agoon
ತೈಪೆ/ತೈವಾನ್: ಆಗಸ್ಟ್ 03 (ಯು.ಎನ್.ಐ.) ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದನ್ನೇ ಜಗತ್ತಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಇನ್ನೊಂದು ಯುದ್ಧಕ್ಕೆ ವಿಶ್ವ ಸನ್ನದ್ಧವಾಗುತ್ತಿದೆಯೇ ಅನ್ನೋ ವಿಚಾರ ಜಗತ್ತಿನ ಜನರನ್ನು ಚಿಂತೆಗೆ ದೂಡಿದೆ. ಯುಎಸ್ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ರಾತ್ರಿ ತೈವಾನ್ಗೆ ಆಗಮಿಸುತ್ತಿದ್ದಂತೆ ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
ಅಮೆರಿಕದ ವಿರುದ್ಧ ಡ್ರ್ಯಾಗನ್ ರಾಷ್ಟ್ರ ಕೆಂಡಕಾರುತ್ತಿದೆ. ತೈವಾನ್ ಮೇಲಿನ ತನ್ನ ಸಿಟ್ಟನ್ನು ಹಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ತೀರಿಸಿಕೊಳ್ಳಲು ಚೀನಾ ಆರಂಭಿಸಿದೆ. ಇಷ್ಟು ಮಾತ್ರವಲ್ಲದೆ ತೈವಾನ್ ನ ನೈಋತ್ಯ ಭಾಗದಲ್ಲಿ 21 ಸೇನಾ ವಿಮಾನಗಳನ್ನು ಹಾರಿಸುವ ಮೂಲಕ ಚೀನಾ ಸೇನೆ ತನ್ನ ಶಕ್ತಿ ಪ್ರದರ್ಶಿಸಿದೆ. ಚೀನಾದ ಮಿಲಿಟರಿ ಪಿಎಲ್ಎ, ತೈವಾನ್ ಸುತ್ತಲೂ ಫೈರ್ ಡ್ರಿಲ್ಗಳನ್ನು ಆರಂಭಿಸಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಕ್ಸಿನ್ಹುವಾ ಸುದ್ದಿಸಂಸ್ಥೆ, ತೈವಾನ್ ಸುತ್ತಲೂ ಮಿಲಿಟರಿ ಕಾರ್ಯಾಚರಣೆಗಳನ್ನು ಚೀನಾ ನಡೆಸುತ್ತಿದೆ ಎಂದು ವರದಿ ಮಾಡಿದೆ. ಇನ್ನೊಂದೆಡೆ ಹೇಳಿಕೆ ನೀಡಿರುವ ಚೀನಾ, ‘ಒನ್ ಚೀನಾ ನೀತಿ’ಯನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಪೆಲೋಸಿ ಭೇಟಿಗೆ ಪಾಕಿಸ್ತಾನ ಆಕ್ರೋಶ:
ಅಮೆರಿಕದ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ಕುರಿತು ಪಾಕಿಸ್ತಾನ ತನ್ನ ಹೇಳಿಕೆ ನೀಡಿದ್ದು, “ಪೆಲೋಸಿಯ ಭೇಟಿಯು ಪ್ರಾದೇಶಿಕ ಶಾಂತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ” ಎಂದು ತಿಳಿಸದೆ. .
ತೈವಾನ್ ಜಗತ್ತಿಗೆ ಏಕೆ ಮುಖ್ಯ?
ಫೋನ್ಗಳು, ಲ್ಯಾಪ್ಟಾಪ್ಗಳು, ವಾಚ್ಗಳಿಂದ ಹಿಡಿದು ಕಾರುಗಳವರೆಗೆ ಹೆಚ್ಚಿನ ಚಿಪ್ಗಳನ್ನು ತೈವಾನ್ನಲ್ಲಿ ತಯಾರಿಸಲಾಗುತ್ತದೆ. ತೈವಾನ್ನ ಒನ್ ಮೇಜರ್ ಕಂಪನಿಯು ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಚಿಪ್ಗಳನ್ನು ಉತ್ಪಾದಿಸುತ್ತದೆ. ಈ ಕಾರಣಕ್ಕಾಗಿ, ತೈವಾನ್ನ ಆರ್ಥಿಕತೆಯು, ಜಗತ್ತಿನ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ತೈವಾನ್ ಅನ್ನು ಚೀನಾ ಆಕ್ರಮಿಸಿಕೊಂಡರೆ, ಈ ಅತ್ಯಂತ ಪ್ರಮುಖ ಉದ್ಯಮವನ್ನು ಚೀನಾ ನಿಯಂತ್ರಿಸಲಿದೆ ಎಂಬ ಆತಂಕ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳನ್ನು ಕಾಡುತ್ತಿದೆ.
ಸಲ್ಮಾನ್ ರಶ್ದಿ ಆರೋಗ್ಯದಲ್ಲಿ ಚೇತರಿಕೆ; ವೆಂಟಿಲೇಟರ್ ನಿಂದ ಬಿಡುಗಡೆ
ಆಸ್ಟ್ರೇಲಿಯಾದ ಕ್ಯಾನ್ಬೆರಾ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ; ಬಂದೂಕಿನೊಂದಿಗೆ ಓರ್ವನ ಬಂಧನ
ಬೂಕರ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿಗೆ ಚಾಕು ಇರಿತ, ವೆಂಟಿಲೇಟರ್ ನಲ್ಲಿಯೇ ಮುಂದುವರೆದ ಚಿಕಿತ್ಸೆ
ಹಲ್ಲೆಗೊಳಗಾಗಿರುವ ಲೇಖಕ ಸಲ್ಮಾನ್ ರಶ್ದಿ ಅವರ ಆರೋಗ್ಯ ಸ್ಥಿತಿ ಗಂಭೀರ; ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ
ತೈವಾನ್ ; ಆಗಮಿತ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ರದ್ದು
ಸಂಕಷ್ಟದಲ್ಲಿ ಟ್ರಂಪ್: ವಿಚಾರಣೆಗಾಗಿ ನ್ಯೂಯಾರ್ಕ್ ಕಚೇರಿಗೆ ಆಗಮಿಸಿದ ಮಾಜಿ ಅಧ್ಯಕ್ಷ!