Published
1 month agoon
ಬೆಂಗಳೂರು ನಗರ ಜಿಲ್ಲೆ: ಜೂನ್ 7( ಯು.ಎನ್.ಐ.) ಭಾರತದಲ್ಲಿ ಅತೀ ದೊಡ್ಡ ಯೋಜನೆಯಾದ ನರೇಗಾ ಯೋಜನೆ ಅಡಿ ಆನೇಕಲ್ ತಾಲ್ಲೂಕಿಗೆ ಸಂಬಂಧಿಸಿದಂತೆ ಕಳೆದ 4 ವರ್ಷಗಳಲ್ಲಿ ಕೇವಲ 80 ಜನರಿಗೆ ವೇತನ ಪಾವತಿಯಾಗಿದ್ದು, ತ್ವರಿತಗತಿಯಲ್ಲಿ ಎಲ್ಲ ರೈತರಿಗೂ ವೇತನ ಪಾವತಿಸುವ ಕೆಲಸವಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಆನೇಕಲ್ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ನರೇಗಾ ಅಡಿ ಎಲ್ಲಾ 643 ರೈತರಿಗೆ ವೇತನವನ್ನು ಶೀಘ್ರವಾಗಿ ನೀಡಿ ಎಂದರು.
ಆನೇಕಲ್ ತಾಲ್ಲೂಕು ಮೂರು ನಾಡ ಕಚೇರಿ 28 ಗ್ರಾಮ ಪಂಚಾಯಿತಿ ಐದು ಪುರಸಭೆ ಹಾಗೂ ಒಂದು ನಗರ ಸಭೆ ಹೊಂದಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳು ತಾವು ಮಾಡುವ ಕೆಲಸಗಳು ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತೆ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟಂತೆ ತಾಲ್ಲೂಕಿನಲ್ಲಿರುವ ರೈತರ ನಿರ್ದಿಷ್ಟ ಸಂಖ್ಯೆ ಗುರುತಿಸಿ ಪಿಎಂ ಕಿಸಾನ್ ಯೋಜನೆಯಡಿ ಎಲ್ಲ ರೈತರನ್ನು ಸೇರ್ಪಡೆಗೊಳಿಸುವುದರೊಂದಿಗೆ ಫ್ರೂಟ್ಸ್ ಅಪ್ ನಲ್ಲಿ ಎಲ್ಲಾ ರೈತರ ಬೆಳೆಯ ಮಾಹಿತಿ ನಮೂದಿಸುವ ಕಾರ್ಯವಾಗಬೇಕು ಎಂದರು.
ಆನೇಕಲ್ ತಾಲ್ಲೂಕಿನಲ್ಲಿ ಸುಮಾರು 31500 ಜಾನುವಾರುಗಳಿದ್ದು 5000 ಹಸುಗಳಿಗೆ ಲಸಿಕೆ ನೀಡಿ UID tag ಕಿವಿಗೆ ಹಾಕಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ತಲ್ಲೂಕಿನಲ್ಲಿ ಗೋ ಶಾಲೆಗೆ ಬೇಕಾದಂತ ಜಾಗವನ್ನು ಮಂಜೂರು ಮಾಡುವ ಹಾಗೂ ಬುಕ್ಸಾಗರ ಸರ್ವೇ ನಂಬರ್ 97ರ 6 ಎಕರೆ ಗೋಶಾಲೆಗೆ ಅಡ್ಡವಾಗಿ ರಸ್ತೆ ಬದಿ ಇರುವ ಗೋಡೆಯನ್ನು ತೆರವುಗೊಳಿಸುವ ಭರವಸೆ ನೀಡಿದರು .
ಕೆ ಸಿ ವ್ಯಾಲಿ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ತಾಲ್ಲೂಕಿನ 69 ಕೆರೆಗಳಲ್ಲಿ 8 ಕೆರೆಗಳು ಭರ್ತಿಯಾಗಿದ್ದು ಉಳಿದ ಕೆರೆಗಳನ್ನು ಈ ವರ್ಷಾತ್ಯಂದೊಳಗೆ ತುಂಬಿಸುವ ಕೆಲಸ ಆಗಬೇಕು. ಕೆರೆಗಳಿಗೆ ಕಲುಷಿತ ನೀರು ಬಾರದಂತೆ ನೋಡಿಕೊಳ್ಳುಬೇಕು ಎಂದರು. ಯಾವ ಯಾವ ಕೆರೆಗಳಿಗೆ ಕೆ ಸಿ ವ್ಯಾಲಿ ಮೂಲಕ ನೀರು ತುಂಬಿಸಲಾಗುತ್ತಿದೆಯೋ ಅವುಗಳ ಬಳಿಯಿರುವ ಕೊಳವೆ ಬಾವಿಗಳನ್ನು ಬೇರೆಡೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಅತ್ತಿಬೆಲೆಯ ಟಿ ವಿ ಎಸ್ ರಸ್ತೆ ತುಂಬಾ ಹದಗೆಟ್ಟಿದ್ದು, ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತಿದ್ದು, ಇನ್ನು ಮೂರು ದಿನಗಳಲ್ಲಿ ಅದನ್ನು ಸರಿಪಡಿಸುವಂತೆ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು. ಆಹಾರ ಇಲಾಖೆಗೆ 4692 ಅರ್ಜಿಗಳು ಬಂದಿದ್ದು 2474 ಜನರಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗಿದ್ದು, ಅತೀ ಶಿಘ್ರವಾಗಿ ಎಲ್ಲರಿಗೂ ತಲುಪಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು .
ತಾಲ್ಲೂಕಿನ 457 ಅಂಗನವಾಡಿ ಗಳಲ್ಲಿ 297 ಸ್ವಂತ ಕಟ್ಟಡಗಳನ್ನು ಹೊಂದಿದ್ದು 118 ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದೆ. ಆದಕಾರಣ ಶಾಲೆಗಳಲ್ಲಿ ಒಂದೆರಡು ಕೊಠಡಿ ಗಳನ್ನು ಅಂಗನವಾಡಿಗೆ ಮೀಸಲಿಡಲು ನಿರ್ಧರಿಸಿದ್ದು ಅದರಂತೆ 20 ಸ್ಥಳಗಳನ್ನು ಗುರುತಿಸಿದ್ದು, ಇನ್ನು 98 ಬಾಕಿ ಇವೆ. ಇದನ್ನೂ ತ್ವರಿತವಾಗಿ ಗುರುತಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಆನೇಕಲ್ ತಹಶೀಲ್ದಾರರಾದ ಪಿ. ದಿನೇಶ್, ಅನೇಕಲ್ ತಾಲ್ಲೂಕು ಯೋಜನಾಧಿಕಾರಿಗಳಾದ ಕೆ.ಲೀಲೋದಯ ಕುಮಾರಿ ಮತ್ತು ಆನೇಕಲ್ ವಿಶೇಷ ತಹಶೀಲ್ದಾರ್ ರಾದ ಬಿ ಎಸ್ ವೆಂಕಟಾಚಲಪತಿ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಣಮಂತ ನಿರಾಣಿಗೆ ಶುಭಾಶಯ ತಿಳಿಸಿದ ಮುರುಗೇಶ್ ನಿರಾಣಿ
ಸಚಿವ ಉಮೇಶ ಕತ್ತಿ ಹೇಳಿಕೆ ಕಟುವಾಗಿ ಖಂಡಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಜುಲೈ ೧ ರಿಂದ ಕಬ್ಬನ್ ಪಾರ್ಕಿನಲ್ಲಿ ಶ್ವಾನ ಪ್ರವೇಶ ನಿಷೇಧ
ಕೊಮ್ಮಘಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮ ಹೀಗಿದೆ!
ಬೆಂಗಳೂರಿಗೆ ಡಾಕ್ಯುಮೆಂಟ್: ಸಿಎಂ ಬೊಮ್ಮಾಯಿ
ಕಾಲಮಿತಿಯಲ್ಲಿ ಕಾಮಗಾರಿಗಳು ಪೂರ್ಣ: ಸಿಎಂ ಬೊಮ್ಮಾಯಿ