Published
5 months agoon
By
Vanitha Jainನವದೆಹಲಿ, ಡಿಸೆಂಬರ್ 11(ಯು.ಎನ್.ಐ) ಭಾರತವು ಶೋಕದಲ್ಲಿದೆ, ಆದರೂ ದೇಶದ ಅಭಿವೃದ್ಧಿ ಮಾತ್ರ ನಿಲ್ಲುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದಲ್ಲಿ ಸರಯು ನಹರ್ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿ, ಸುಮಾರು ರೂ 9,800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಯೋಜನೆಯು ಸುಮಾರು 14 ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸಲಿದೆ. ಈಗಾಗಲೇ ರೂ 4,600 ಕೋಟಿಗೂ ಹೆಚ್ಚು ಹಣವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಕುನ್ನೂರ್ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಮತ್ತು ಇತರ ಸೈನಿಕರನ್ನು ಸ್ಮರಿಸಿದ ಪ್ರಧಾನಿ ಮೋದಿ, “ಭಾರತವು ನೋವಿನಲ್ಲಿದೆ. ಆದರೆ ನೋವಿನ ನಡುವೆಯೂ ನಾವು ನಮ್ಮ ವೇಗವನ್ನು ಅಥವಾ ಅಭಿವೃದ್ಧಿಯನ್ನು ಮುಂದುವರೆಸಬೇಕಾಗಿದೆ. ಭಾರತವು ನಿಲ್ಲುವುದಿಲ್ಲ. ಭಾರತೀಯರಾದ ನಾವು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಆತಂರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮುಂದುವರೆದು ಕೆಲವರ ಆದ್ಯತೆ ಕಲ್ಪನೆ, ಆದರೆ ನಮ್ಮ ಆದ್ಯತೆ ಕಾರ್ಯಗತಗೊಳಿಸುವಿಕೆ ಎಂದ ಅವರು ಕೆಲವರದ್ದು ಉದ್ಘಾಟನೆಗೆ ರಿಬ್ಬನ್ ಕತ್ತರಿಸಿ ಕೆಲಸವನ್ನು ಮರೆತು ಬಿಡುವುದು ವಾಡಿಕೆ. ಆದರೆ ಡಬಲ್ ಎಂಜಿನ್ ಸರ್ಕಾರದಲ್ಲಿ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುವುದಾಗಿದೆ ಎಂದು ತಿಳಿಸಿದರು.
ಏನಿದು ಸರಯು ನಹರ್ ರಾಷ್ಟ್ರೀಯ ಯೋಜನೆ?
ಈ ಯೋಜನೆಗೆ ಘಘರಾ, ಸರಯು, ರಾಪ್ತಿ, ಬಂಗಂಗಾ ಮತ್ತು ರೋಹಿಣಿ ಎಂಬ ಐದು ನದಿಗಳು ಒಳಪಡುತ್ತವೆ. ಈ ಯೋಜನೆಯಿಂದ ಪೂರ್ವ ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳಾದ ಬಹ್ರೈಚ್, ಶ್ರಾವಸ್ತಿ, ಬಲರಾಮ್ಪುರ, ಗೊಂಡಾ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಗೋರಖ್ಪುರ ಮತ್ತು ಮಹಾರಾಜ್ಗಂಜ್ಗಳಿಗೆ ಪ್ರಯೋಜನವಾಗಲಿದೆ. ಹೊಸ ಯೋಜನೆಯಿಂದ ನೀರಿನ ಅಭಾವ ಎದುರಿಸುತ್ತಿರುವ ಪ್ರದೇಶಗಳಿಗೆ ಅನುಕೂಲವಾಗಲಿದೆ.
ಬಹಿರಂಗ ಕ್ಷಮೆಯಾಚಿಸುವಂತೆ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದ ಎಎಪಿ ಶಾಸಕ
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರ್ಕಾರ
ಅಜಯ್ ದೇವಗನ್ ರಂತೆ ಸ್ಟಂಟ್ ಪ್ರದರ್ಶನ; ಖಾಕಿ ಅತಿಥಿಯಾದ ಯುವಕ
ಬೆಚ್ಚಿಬೀಳಿಸುವ ಪ್ಲಾನ್!; ಮನೆಯನ್ನೇ ಗ್ಯಾಸ್ ಚೇಂಬರ್ ಮಾಡಿಕೊಂಡು ಮೂವರ ಆತ್ಮಹತ್ಯೆ!
ಥಾಮಸ್ ಕಪ್ ವಿಜೇತ ಲಕ್ಷ್ಯಸೇನ್ ಬಳಿ ‘ಆ ಸ್ವೀಟ್’ ತರಲು ಹೇಳಿದ್ದರಂತೆ ಪ್ರಧಾನಿ ಮೋದಿ
ರಾಂಬನ್-ಬನಿಹಾಲ್ ಸುರಂಗ ಕುಸಿತ: ತನಿಖೆಗೆ ಕೇಂದ್ರದಿಂದ ಸಮಿತಿ ರಚನೆ