Connect with us


      
ದೇಶ

ಬಿಜೆಪಿ ಮಾಜಿ ಶಾಸಕನ ಮೇಲೆ ನಕ್ಸಲರಿಂದ ಗುಂಡಿನ ದಾಳಿ – ಇಬ್ಬರು ಸಾವು

Iranna Anchatageri

Published

on

ರಾಂಚಿ : ಜನವರಿ 04 (ಯು.ಎನ್.ಐ.) ಜಾರ್ಖಂಡ್‌ನ ಚೈಬಾಸಾದಲ್ಲಿ ಸುಮಾರು ನೂರು ಮಾವೋವಾದಿಗಳ ಗುಂಪು ಬಿಜೆಪಿಯ ಶಾಸಕರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದೆ. ಪಶ್ಚಿಮ ಸಿಂಗ್ ಭೂಮ್ ಜಿಲ್ಲೆಯ ಚೈಬಾಸಾದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಪಂದ್ಯದ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗುರುಚರಣ್ ನಾಯಕ್ ಎಂಬವರ ಮೇಲೆ ಈ ಫೈರಿಂಗ್ ನಡೆದಿದೆ. ದಿಢೀರ್ ನಡೆದ ಈ ದಾಳಿಯಲ್ಲಿ ಮಾಜಿ ಶಾಸಕನ ಇಬ್ಬರು ಅಂಗರಕ್ಷಕರು ಹುತಾತ್ಮರಾಗಿದ್ದಾರೆ.

ಇಂದು ಸಂಜೆ 6 ರಿಂದ 6:15ರ ಸುಮಾರಿಗೆ ನಡೆದ ಈ ನಕ್ಸಲರ ದಾಳಿಯಲ್ಲಿ ಸ್ಥಳೀಯರ ನೆರವಿನಿಂದ ಮನೋಹರ್ ಪುರ ಕ್ಷೇತ್ರದ ಮಾಜಿ ಶಾಸಕ ಗುರುಚರಣ್ ನಾಯಕ್ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ, ಸಮೀಪದಲ್ಲೇ ಇದ್ದ ಸೋನುವಾ ಪೊಲೀಸ್ ಠಾಣೆಯಲ್ಲಿ ರಕ್ಷಣೆಯನ್ನು ಪಡೆದುಕೊಂಡಿದ್ದಾರೆ. ಹುತಾತ್ಮರಾದ ಯೋಧರನ್ನು ಶಂಕರ್ ನಾಯಕ್ ಹಾಗೂ ಠಾಕೂರ್ ಎಂದು ಗುರುತಿಸಲಾಗಿದೆ. ಅಂಗರಕ್ಷಣೆಗಾಗಿ ನಿಯೋಜಿಸಲ್ಪಟ್ಟಿದ್ದ ಮೂವರ ಯೋಧರ ಶಸ್ತ್ರಾಸ್ತ್ರಗಳನ್ನು ನಕ್ಸಲರು, ತಮ್ಮ ಜೊತೆ ಹೊತ್ತು ಪರಾರಿಯಾಗಿದ್ದಾರೆ ಎಂದು ಯು.ಎನ್.ಐಗೆ ಪೊಲೀಸರು ತಿಳಿಸಿದ್ದಾರೆ.

Continue Reading
Share