Published
2 weeks agoon
By
Vanitha Jainಚೆನ್ನೈ: ಜೂನ್ 21 (ಯು.ಎನ್.ಐ.) ಈ ತಿಂಗಳ ಆರಂಭದಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ ಮತ್ತು ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಶಿವನ್ ಜೋಡಿ ಹನಿಮೂನ್ ಗೆ ಥಾಯ್ಲೆಂಡ್ ಗೆ ತೆರಳಿದ್ದು, ಎಂಜಾಯ್ ಮಾಡುತ್ತಿದ್ದಾರೆ.
ಥಾಯ್ಲೆಂಡ್ ನಲ್ಲಿ ಸಮಯ ಕಳೆಯುತ್ತಿರುವ ಫೋಟೋವನ್ನು ವಿಘ್ನೇಶ್ ಶಿವನ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೂರ್ಯನ ಕಿರಣಗಳ ಜೊತೆ ಸೆರೆಹಿಡಿದಿರುವ ಫೋಟೋಗಳ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಇನ್ #ಥೈಲ್ಯಾಂಡ್ ವಿತ್ ಮೈ ಥಾರಾಮ್” ಎಂದು ಶೀರ್ಷಿಕೆಯಡಿ ಹಂಚಿಒಕೊಂಡಿರುವ ಫೋಟೋದಲ್ಲಿ ನಯನಾ ಹಳದಿ ಬಣ್ಣದ ಬಟ್ಟೆಯಲ್ಲಿ ಮಿಂಚಿದರೆ, ವಿಘ್ನೇಶ್ ಅವರು ಕಪ್ಪು ಟೀ ಶರ್ಟ್ ಮತ್ತು ಆಲಿವ್ ಹಸಿರು ಪ್ಯಾಂಟ್ ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಸೂರ್ಯನ ರಶ್ಮಿ ಇವರ ಪ್ರೀತಿಗೆ ಸಾಕ್ಷಿ ಎಂಬಂತೆ ಪ್ರತಿ ಫೋಟೊದಲ್ಲೂ ಅದ್ಭುತವಾಗಿ ಬಂದಿದೆ. ದಕ್ಷಿಣದ ಸೂಪರ್ಸ್ಟಾರ್ಗಳಾದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೂನ್ 9 ರಂದು ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ವಿವಾಹವಾದರು. ಮದುವೆಯಲ್ಲಿ ರಜನಿಕಾಂತ್, ಶಾರುಖ್ ಖಾನ್, ವಿಜಯ್, ಅಜಿತ್ ಮತ್ತು ಅಟ್ಲಿ ಭಾಗವಹಿಸಿದ್ದರು.
ಸಿಗರೇಟ್ ಸೇದುತ್ತಿರುವ ಶಿವ, ಪಾರ್ವತಿ ಫೋಟೋ ಹಂಚಿಕೊಂಡ ನಿರ್ದೇಶಕಿ ಲೀನಾ ಮಣಿಮೇಕಲೈ
ಇಬ್ಬರು ಬಾಲಕಿಯರಿಗೆ ಥಳಿಸಿದ ನಟ, ಬಂಧನ
ಜತೆಗಿರುವನು ಚಂದಿರ ಮತ್ತು ಗರಂಹವಾ ಸಿನೆಮಾ
ನಟ ವಿಜಯ್ ಬಾಬು ನಿರೀಕ್ಷಣಾ ಜಾಮೀನು ರದ್ಧತಿಗೆ ಸುಪ್ರೀಂ ಕೋರ್ಟ್ ನಿರಾಕರಣೆ
ಸಿಗರೇಟ್ ಸೇದುತ್ತಿರುವ ಕಾಳಿ ಮಾತೆಯ ಪೋಸ್ಟರ್ ವೈರಲ್
100 ದಿನ ಪೂರೈಸಿದ ಬ್ಲಾಕ್ ಬಸ್ಟರ್ ಮೂವೀ “ಆರ್ಆರ್ಆರ್”