Connect with us


      
ದೇಶ

ನೆದರ್ ಲ್ಯಾಂಡ್ ನಲ್ಲಿ ಅಗ್ನಿ ಅವಘಡ, ಮೃತಪಟ್ಟ ತೆಲಂಗಾಣ ವ್ಯಕ್ತಿ

UNI Kannada

Published

on

ಹೈದರಬಾದ್ : ಜನೆವರಿ 07 (ಯು.ಎನ್.ಐ.) ನೆದರ್ಲೆಂಡ್ಸ್‌ನ ರಾಜಧಾನಿ ಹೇಗ್‌ನಲ್ಲಿರುವ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿಯಲ್ಲಿ ಗಂಭೀರವಾಗಿ ಗಾಯಗೊಂಡ ಹೈದರಾಬಾದ್‌ನ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಕುಟುಂಬ ಸದಸ್ಯರು ಅವರ ಅಂತ್ಯಕ್ರಿಯೆಗಾಗಿ ಕಾಯುತ್ತಿದ್ದಾರೆ.

ಹೈದರಬಾದ್ ನ ಆಸಿಫ್ ನಗರದ ಅಬ್ದುಲ್‌ಹಾದಿ (43) ಕೆಲ ವರ್ಷಗಳಿಂದ ನೆದರ್‌ಲ್ಯಾಂಡ್‌ನ ಹೇಗ್‌ನಲ್ಲಿ ನೆಲೆಸಿದ್ದರು. ಅವರು ನೆದರ್ಲ್ಯಾಂಡ್ ಶಾಶ್ವತ ವೀಸಾವನ್ನು ಹೊಂದಿದ್ದರು. ಜನವರಿ 5, 2022 ರ ರಾತ್ರಿ, ಅವರು ಹೇಗ್ ನಗರದಲ್ಲಿ ವಾಸಿಸುತ್ತಿದ್ದ ಶ್ವಿಲ್ಡರ್‌ಶಿಜ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ಗಂಭೀರ ಗಾಯಗೊಂಡ ಅಬ್ದುಲ್ ಹದಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ 24 ಗಂಟೆಗಳ ಬಳಿಕ ಅವರು ಕೊನೆಯುಸಿರೆಳೆದಿದ್ದಾರೆ.

2021ರ ಜನವರಿಯಲ್ಲಿ ಕೊನೆಯ ಬಾರಿಗೆ ಅಬ್ದುಲ್ ಹಾದಿ ಭಾರತಕ್ಕೆ ಬಂದಿದ್ದರು ನಂತರ  ಮಾರ್ಚ್‌ನಲ್ಲಿ ನೆದರ್‌ಲ್ಯಾಂಡ್‌ಗೆ ತೆರಳಿದ್ದರು. ಶೀಘ್ರದಲ್ಲೇ ಮನೆಗೆ ಬರುತ್ತೇನೆ ಎಂದಿದ್ದ ಮಗ  ಪ್ರಾಣಬಿಟ್ಟಿದ್ದಾನೆ ಎಂದು ಮೃತನ ತಂದೆ ಮಹಮ್ಮದ್ ಅಹ್ಸಾನ್ ಅಳಲು ತೋಡಿಕೊಂಡರು. ತಮ್ಮ ಮಗನ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರುವಂತೆ ನೆದರ್ಲೆಂಡ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭಾರತೀಯ ವಿದೇಶಾಂಗ ಸಚಿವರು ಮನವಿ ಮಾಡಿದ್ದಾರೆ.

Share