Connect with us


      




ಶಿಕ್ಷಣ

ನೀಟ್ – ಪಿಜಿ ಕೌನ್ಸೆಲಿಂಗ್ ಇದೇ 12 ರಿಂದ ಆರಂಭ

UNI Kannada

Published

on

ನವದೆಹಲಿ, ಜ 9(ಯುಎನ್ ಐ) 2021 – 22ನೇ ಶೈಕ್ಷಣಿಕ ವರ್ಷದ ನೀಟ್ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ಇದೇ 12ರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಅನುಸರಿಸಿ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ಮೂಲಕ ನೀಟ್ ಪಿಜಿ ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸಲಾಗುತ್ತದೆ. ದೇಶ ಕೋವಿಡ್ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿರಲಿದೆ ಎಂದು ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ನೀಟ್ ಪಿಜಿ ಪ್ರವೇಶಾತಿಗಾಗಿ ಒಬಿಸಿ ಸಮುದಾಯಕ್ಕೆ ಶೇಕಡ 27ರಷ್ಟು, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡ 10ರಷ್ಟು ಕೋಟಾ ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ನೀಟ್ ಪಿಜಿ ಕೌನ್ಸೆಲಿಂಗ್ ಆರಂಭ ವಿಳಂಬವನ್ನು ಪ್ರತಿಭಟಿಸಿ ಇತ್ತೀಚೆಗೆ ರೆಸಿಡೆಂಟ್ ವೈದ್ಯರುಗಳ ಸಂಘಟನೆ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ, ಸರ್ಕಾರದ ನಿರ್ಧಾರ ವೈದ್ಯ ಸಮುದಾಯಕ್ಕೆ ದೊಡ್ಡ ಪರಿಹಾರ ಕಲ್ಪಿಸಿದಂತಾಗಿದೆ.

Share