Connect with us


      




ಸಿನೆಮಾ

ಓಓ ಚಿಕಾಗೋ ಎಂದು ಹಾಡುತ್ತಿರುವ ನೇಹಾ

Kumara Raitha

Published

on

ಬೆಂಗಳೂರು: ಮೇ ೧೩ ( ಯು.ಎನ್.‌ಐ.)  ಬಿರುಬೇಸಿಗೆ ಬಂತೆಂದರೆ ಸಾಮಾನ್ಯವಾಗಿ ಸಾಮಾನ್ಯವಾಗಿ ಎಲ್ಲರೂ ತಂಪುತಂಪು ಸ್ಥಳಗಳಿಗೆ ಹೋಗಲು ಬಯಸುತ್ತಾರೆ. ಸೆಲಿಬ್ರಿಟಿಗಳಲ್ಲಿ ಹಲವರು ವಿದೇಶದ ತಮ್ಮತಮ್ಮ ಇಷ್ಟದ  ಊರುಗಳಿಗೆ  ಹಾರಿ ಕೆಲವು ದಿನ ಇದ್ದು ಬರುತ್ತಾರೆ.

ಭಾರತೀಯ ಚಿತ್ರರಂಗದ ಖ್ಯಾತತಾರೆ ನೇಹಾ ಶರ್ಮ ಚಿಕಾಗೋಕ್ಕೆ ಹಾರಿದ್ದಾರೆ. ಅಲ್ಲಿನ ಗಿರಿಧಾಮವೊಂದರಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಈ ಕುರಿತು ಸುಂದರ ಪ್ರಕೃತಿ ನಡುವೆ ನಿಂತಿರುವ ತನ್ನ ಚಿತ್ರದ ಜೊತೆಗೆ “ಈ ಸಮಯದಲ್ಲಿ ಕೆಲವು ಸ್ಥಳಗಳು ತಂಪಾಗಿರುತ್ತದೆ. ನನ್ನ ಮನಸಿನಲ್ಲಿ ಚಿಕಾಗೋ ಅಚ್ಚೊತ್ತಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

Share