Connect with us


      




ಕ್ರೀಡೆ

ಮಹಿಳೆಯರ ಕ್ರಿಕೆಟ್ ಅಂಗಳದಲ್ಲೂ ಕಂಪು ಸೂಸಿದ ಅಲ್ಲು ಅರ್ಜುನ್ ‘ಪುಷ್ಪ’

Lakshmi Vijaya

Published

on

ದುಬೈ: ಮೇ 10 (ಯು.ಎನ್.ಐ.) ಇದೀಗ ಮಹಿಳಾ ಕ್ರಿಕೆಟ್‌ಗೂ ‘ಪುಷ್ಪಾ’ ಜ್ವರ ತಟ್ಟಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ರವೀಂದ್ರ ಜಡೇಜಾ ಮತ್ತು ಒಬೆದ್ ಮೆಕಾಯ್ ಅವರು ಪುಷ್ಪ ಸ್ಟೈಲ್ ನ ಅನುಕರಿಸಿದ ನಂತರ ದುಬೈನಲ್ಲಿ ನಡೆದ ಫೇರ್‌ಬ್ರೇಕ್ ಇನ್ವಿಟೇಶನಲ್ ಟೂರ್ನಮೆಂಟ್‌ನಲ್ಲಿ  ಆಟಗಾರ್ತಿಯೊಬ್ಬರು ‘ಪುಷ್ಪ’  ಸಿಗ್ನೇಚರ್ ಮೂಮೆಂಟ್ ನ ಅನುಕರಣೆ ಮಾಡಿದ್ದಾರೆ.  ಐಸಿಸಿ ಈ ವಿಡಿಯೋವನ್ನ ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.

ಮೇ 5 ರಂದು ಟೊರ್ನಾಡೋಸ್ ವುಮೆನ್ ಮತ್ತು ಸಫೈರ್ಸ್ ಮಹಿಳೆಯರ ನಡುವಿನ ಪಂದ್ಯದಲ್ಲಿ, ನೇಪಾಳದ ಸೀತಾ ರಾಣಾ ಮಗರ್ ತನ್ನ ಕೈಯನ್ನು ಗಲ್ಲದ ಕೆಳಗೆ ಮೂವ್ ಮಾಡುತ್ತಾ ಪುಷ್ಪಾ ಸ್ಟೈಲನ್ನು ಅನುಸರಿಸಿದ್ದಾರೆ. ಸೂಪರ್‌ಹಿಟ್ ಚಲನಚಿತ್ರ ‘ಪುಷ್ಪಾ’ದಲ್ಲಿ ಅಲ್ಲು ಅರ್ಜುನ್ ಅವರ ಶೈಲಿಯನ್ನು ಅನುಕರಿಸುವ ಮೂಲಕ ವಿಕೆಟ್ ಪಡೆದ ನಂತರ ಸಂಭ್ರಮವನ್ನು ಆಚರಿಸಿದ್ದಾರೆ.

ವಿಡಿಯೋ ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.instagram.com/p/CdYDsooF_sy/?utm_source=ig_embed&utm_campaign=embed_video_watch_again

ಫೇರ್‌ಬ್ರೇಕ್ ಇನ್ವಿಟೇಶನಲ್ ಟೂರ್ನಮೆಂಟ್ ನವೀನ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಉದಯೋನ್ಮುಖ ರಾಷ್ಟ್ರದ ಆಟಗಾರರೊಂದಿಗೆ ಸ್ಥಾಪಿತವಾದ ಕ್ರಿಕೆಟ್ ತಾರೆಗಳ ಗುಂಪು. ಮಹಿಳಾ ಕ್ರಿಕೆಟ್ ಕ್ರೀಡೆಯು ಜಾಗತಿಕವಾಗಿ ವಿಸ್ತರಿಸಲು ಮತ್ತು ಪುರುಷರ ಕ್ರಿಕೆಟ್ ಆಟದ ಮೇಲಿನ ಅವಲಂಬನೆಯನ್ನು ಮೀರಿಸುತ್ತದೆ. ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ವೆಸ್ಟ್ ಇಂಡೀಸ್ ನಾಯಕಿ ಸ್ಟಾಫಾನಿ ಟೇಲರ್ ಮತ್ತು ಪಾಕಿಸ್ತಾನದ ಸನಾ ಮಿರ್ ಒಳಗೊಂಡ ಫೇರ್‌ಬ್ರೇಕ್ ಇನ್ವಿಟೇಷನಲ್ ಕಳೆದ ಬುಧವಾರ ಪ್ರಾರಂಭವಾಯಿತು.

Share