Connect with us


      
ದೇಶ

ದೆಹಲಿಯಲ್ಲಿ ರದ್ದಾಗಲಿವೆ 15ವರ್ಷಕ್ಕಿಂತ ಹಳೆಯ ವಾಹನಗಳು

UNI Kannada

Published

on

15 YEARS OLD PETROL VEHICLES ARE BAN IN DELHI
ಹಳೆಯ ಡೀಸೆಲ್ ಅಥವಾ ಪೆಟ್ರೋಲ್ ಚಾಲಿತ ಕಾರುಗಳು ಅಥವಾ ಇತರ ನಾಲ್ಕು ಚಕ್ರದ ವಾಹನಗಳಲ್ಲಿ ಎಲೆಕ್ಟ್ರಿಕ್ ಕಿಟ್‌ನ ಬೆಲೆ 3 ರಿಂದ 5 ಲಕ್ಷ ರೂಪಾಯಿ ಎಂದು ಆಟೋಮೊಬೈಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ,ಜನೆವರಿ.04(ಯು.ಎನ್.ಐ)ಮುಂದಿನ ದಿನಗಳಲ್ಲಿ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ನೋಂದಣಿಯನ್ನೂ ರದ್ದುಪಡಿಸಲಾಗುವುದು ಎಂದು ದೆಹಲಿ ಸಾರಿಗೆಯಿಂದ ಮಾಹಿತಿ ಲಭ್ಯವಾಗಿದೆ.

ಹೊಸ ವರ್ಷದಿಂದ ಹೊಸ ನಿಯಮ ಜಾರಿಯಾಗಿದೆ. ದೆಹಲಿ ಸರ್ಕಾರ ಮೊದಲೇ ಘೋಷಿಸಿದಂತೆ 10 ವರ್ಷಕ್ಕಿಂತ ಹಳೆ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲಾಗಿದೆ.ಮೊದಲ ಹಂತದಲ್ಲಿ ದೆಹಲಿ ಸರ್ಕಾರ ಬರೋಬ್ಬರಿ 1 ಲಕ್ಷ ಹಳೇ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲಾಗಿದೆ. ಇನ್ನು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನದ ರಿಜಿಸ್ಟ್ರೇಶನ್ ಶೀಘ್ರದಲ್ಲೇ ರದ್ದಾಗಲಿದೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ನೋಂದಣಿ ರದ್ದಾಗಿರುವ ಕಾರುಗಳನ್ನು ಮತ್ತೆ ರಸ್ತೆಗಿಳಿಸಿದರೆ ದುಬಾರಿ ದಂಡ ಪಾವತಿಸಬೇಕು. ಇಷ್ಟೇ ಅಲ್ಲ ಪೊಲೀಸರು ವಾಹನವನ್ನು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಸಮೀಪದ ವಾಹನ ಗುಜುರಿ ಕೇಂದ್ರಕ್ಕೆ ರವಾನಿಸಲಿದ್ದಾರೆ.

ನವ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ನಡುವೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಕಳೆದ  ಶನಿವಾರ 1.10 ಲಕ್ಷ ಡೀಸೆಲ್ ವಾಹನಗಳ ನೋಂದಣಿಯನ್ನು ಕೊನೆಗೊಳಿಸಿದ್ದ ಅರವಿಂದ್ ಕೇಜ್ರಿವಾಲ್ ಸರ್ಕಾರದ ಈ ನಿರ್ಧಾರದ ನಂತರ, ಈ ವಾಹನಗಳ ಮಾಲೀಕರಿಗೆ ಎರಡು ಆಯ್ಕೆಗಳು ಮಾತ್ರ ಉಳಿದಿವೆ.ಈ ವಾಹನಗಳಲ್ಲಿ ಮರುಹೊಂದಿಸಿ  ಅವುಗಳಲ್ಲಿ ಎಲೆಕ್ಟ್ರಿಕ್ ಕಿಟ್‌ಗಳನ್ನು ಅಳವಡಿಸಿಕೊಳ್ಳಬೇಕು.ಇಲ್ಲವೇ ಯಾವುದೇ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ತೆಗೆದುಕೊಳ್ಳದೆ ಬೇರೆ ರಾಜ್ಯದಲ್ಲಿ ಮಾರಾಟ ಮಾಡಬೇಕು.ಎನ್ಒಸಿ ಮಾಡಬಹುದಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಪೆಟ್ರೋಲ್ ಚಾಲಿತ ವಾಹನಗಳ ಸಂಖ್ಯೆ 43 ಲಕ್ಷ.  ಇವುಗಳಲ್ಲಿ 32 ಲಕ್ಷ ದ್ವಿಚಕ್ರ ವಾಹನಗಳು ಮತ್ತು 11 ಲಕ್ಷ ಕಾರುಗಳು ಸೇರಿವೆ.  ರಾಜಧಾನಿಯ ರಸ್ತೆಗಳಲ್ಲಿ ಹತ್ತು ವರ್ಷಕ್ಕಿಂತ ಹಳೆಯದಾದ ಯಾವುದೇ ಡೀಸೆಲ್ ವಾಹನ ಅಥವಾ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ಚಾಲಿತ ವಾಹನಗಳು ಓಡಾಟ ಕಂಡು ಬಂದಲ್ಲಿ ಕೂಡಲೇ ಜಪ್ತಿ ಮಾಡಿ ಸ್ಕ್ರ್ಯಾಪ್ ಮಾಡಿ ಕಳುಹಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ಆದೇಶಗಳಿಗೆ ಅನುಗುಣವಾಗಿ ದೆಹಲಿ ಸರ್ಕಾರವು ಜನವರಿ 1, 2022 ರಂದು ಹತ್ತು ವರ್ಷಗಳನ್ನು ಪೂರೈಸಿದ 101247 ಡೀಸೆಲ್ ಚಾಲಿತ ವಾಹನಗಳ ನೋಂದಣಿ ರದ್ದುಗೊಳಿಸಿದೆ.  ಈ ವಾಹನಗಳನ್ನು ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಬೇಕಾದರೆ ಎನ್‌ಒಸಿ ಪಡೆಯಬೇಕಾಗುತ್ತದೆ.  ವಶಪಡಿಸಿಕೊಂಡ ಈ ಡೀಸೆಲ್ ವಾಹನಗಳಲ್ಲಿ 87 ಸಾವಿರ ಕಾರುಗಳು ಮತ್ತು ಇತರ ಸರಕುಗಳನ್ನು ಸಾಗಿಸುವ ವಾಹನಗಳು, ಬಸ್‌ಗಳು ಮತ್ತು ಟ್ರ್ಯಾಕ್ಟರ್‌ಗಳು ಸೇರಿವೆ.

ದೆಹಲಿಯ ಸಾರಿಗೆ ಇಲಾಖೆಯು ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳನ್ನು ಮರುಹೊಂದಿಸಲು ಎಂಟು ಎಲೆಕ್ಟ್ರಿಕ್ ಕಿಟ್ ತಯಾರಕರೊಂದಿಗೆ ಕೈಜೋಡಿಸಿದೆ.  ಇದರಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೂ ಆಯ್ಕೆಗಳಿದ್ದು, ಎನ್‌ಜಿಟಿಯ ಆದೇಶದ ಪ್ರಕಾರ ಇನ್ನು ಮುಂದೆ ರಸ್ತೆಯಲ್ಲಿ ಸಂಚರಿಸುವಂತಿಲ್ಲ.  ಶೀಘ್ರದಲ್ಲೇ ಇತರ ಹಲವು ಕಂಪನಿಗಳನ್ನು ಈ ಪ್ಯಾನೆಲ್‌ನಲ್ಲಿ ಸೇರಿಸಲಾಗುವುದು.

ಹಳೆಯ ಡೀಸೆಲ್ ಅಥವಾ ಪೆಟ್ರೋಲ್ ಚಾಲಿತ ಕಾರುಗಳು ಅಥವಾ ಇತರ ನಾಲ್ಕು ಚಕ್ರದ ವಾಹನಗಳಲ್ಲಿ ಎಲೆಕ್ಟ್ರಿಕ್ ಕಿಟ್‌ನ ಬೆಲೆ 3 ರಿಂದ 5 ಲಕ್ಷ ರೂಪಾಯಿ ಎಂದು ಆಟೋಮೊಬೈಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಆದರೆ  ಇದು ವಾಹನದ ಬ್ಯಾಟರಿ ಸಾಮರ್ಥ್ಯ ಮತ್ತು ಇತರ ಅಂಶಗಳನ್ನು ಅವಲಂಬಿಸಿರುತ್ತದೆ.

ಈಗಾಗಲೇ ದೆಹಲಿ ಸರ್ಕಾರ ಹೊಸವರ್ಷದಂದು 10 ವರ್ಷ ಹಳೆಯ ವಾಹನಗಳನ್ನು ರದ್ದುಮಾಡಿದೆ.

Share