Connect with us


      
ದೇಶ

ಪಂಚ ರಾಜ್ಯಗಳ ಚುನಾವಣೆ ಘೋಷಣೆಗೂ ಮುನ್ನ ಪಂಜಾಬ್ ಗೆ ನೂತನ ಡಿಜಿಪಿ!

Iranna Anchatageri

Published

on

ಚಂಡೀಗಢ : ಜನೆವರಿ 08 (ಯು.ಎನ್.ಐ.) ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಮಹಾ ಸಮರಕ್ಕೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಒಂದೆಡೆ ರಾಜಕೀಯ ಪಕ್ಷಗಳು ಕಾರ್ಯತಂತ್ರದಲ್ಲಿ ಮಗ್ನರಾಗಿದ್ದರೆ, ಇತ್ತ ಪಂಜಾಬ್ ಪೊಲೀಸ್ ಇಲಾಖೆಯಲ್ಲ ಮೇಜರ್ ಸರ್ಜರಿ ಆಗಿದೆ.

ಪಂಜಾಬ್ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಸಿಎಂ ಚರಂಜಿತ್ ಸಿಂಗ್ ಚನ್ನಿ ಹೊಸ ಪೊಲೀಸ್ ಮಹಾನಿರ್ದೇಶಕ ಅಂದರೆ ರಾಜ್ಯದ ನೂತನ ಡಿಜಿಪಿ ಹೆಸರಿಗೆ ಮುದ್ರೆ ಒತ್ತಿದ್ದಾರೆ. 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ವಿಕೆ ಭಾವ್ರಾ ಪಂಜಾಬ್ ನ ನೂತನ ಡಿಜಿಪಿ ಆಗಿ ಆಯ್ಕೆಯಾಗಿದ್ದಾರೆ. 2019ರ ಲೋಕಸಭಾ ಚುನಾವಣೆ ವೇಳೆ ವಿ.ಕೆ.ಭಾವ್ರಾ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ನೂತನ ಡಿಜಿಪಿ ನಿವೃತ್ತಿಯಾಗಿರುವ ಬಾವ್ರಾ ಅವರ ನಿವೃತ್ತಿ ಅವಧಿ ಕೇವಲ 9 ತಿಂಗಳು ಮಾತ್ರ ಬಾಕಿ ಉಳಿದಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ವಿ ಕೆ ಭಾವ್ರಾ ಅವರ ನೇತೃತ್ವದಲ್ಲಿ ಪಂಜಾಬ್ ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲಿದ್ದಾರೆ.

ಪ್ರಧಾನಿ ಭದ್ರತಾ ಲೋಪ

ಈ ಹಿಂದೆ ಸಿದ್ದಾರ್ಥ್ ಚಟ್ಟೋಪಾಧ್ಯಾಯ ಪಂಜಾಬ್ ನ ಹಂಗಾಮಿ ಡಿಜಿಪಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜ್‌ಪುರ ಭೇಟಿ ನೀಡಿದ್ದಾಗ ಭದ್ರತಾ ಲೋಪ ಉಂಟಾಗಿ, ಡಿಜಿಪಿ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬಂದಿತ್ತು. ಅಲ್ಲದೆ, ಪಂಜಾಬ್ ಪೊಲೀಸರು ಪ್ರಧಾನಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ತಂಡವೂ ಆರೋಪ ಮಾಡಿತ್ತು. ಹೀಗಾಗಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರನ್ನು ಡಿಜಿಪಿ ಹುದ್ದೆಯಿಂದ ತೆಗೆದು ಹಾಕಲಾಗಿದೆ.

Share