Published
4 months agoon
By
UNI Kannadaನವದೆಹಲಿ : ಜನೆವರಿ 16 (ಯು.ಎನ್.ಐ.) ಭಾರತದ ಸೇನಾ ಸಮವಸ್ತ್ರ ಬದಲಾಗುತ್ತಿದೆ. ಭಾರತೀಯ ಸೇನೆಯು ಆರಾಮದಾಯಕ, ಹವಾಮಾನ ಸ್ನೇಹಿ ಮಾದರಿಯಲ್ಲಿ ಹೊಸ ಸಮವಸ್ತ್ರವನ್ನು ಶನಿವಾರ ಅನಾವರಣಗೊಳಿಸಿದೆ. ಶನಿವಾರ ನಡೆದ ಆರ್ಮಿ ಡೇ ಪರೇಡ್ ನಲ್ಲಿ ಹೊಸ ಸಮವಸ್ತ್ರ ಧರಿಸಿ ಪ್ಯಾರಾಚೂಟ್ ಪಡೆ ಕವಾಯತು ನಡೆಸಿತು.
ಭಾರತೀಯ ಸೇನೆಯ ಹೊಸ ಸಮವಸ್ತ್ರದ ಮುಖ್ಯಾಂಶಗಳು ಇಲ್ಲಿವೆ.
ಹೊಸ ಸಮವಸ್ತ್ರವು ಆಲಿವ್ ಮತ್ತು ಮಣ್ಣಿನ ಬಣ್ಣಗಳು ಸೇರಿದಂತೆ ವಿವಿಧ ಬಣ್ಣಗಳ ಮಿಶ್ರಣವಾಗಿದೆ. ಟ್ರೂಪ್ ಆಯಕಟ್ಟಿನ ಪ್ರದೇಶಗಳು ಮತ್ತು ವಿಭಿನ್ನ ಹವಾಮಾನ ಪರಿಸ್ಥಿತಿಗಳಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿಯ ಸಹಯೋಗದಲ್ಲಿ ವಿವಿಧ ದೇಶಗಳ ಸೇನೆಗಳ ಸಮವಸ್ತ್ರವನ್ನು ವಿಶ್ಲೇಷಿಸಿ ಹೊಸ ಸಮವಸ್ತ್ರಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಮವಸ್ತ್ರ ಹೆಚ್ಚು ಆರಾಮದಾಯಕ ಮತ್ತು ಎಲ್ಲಾ ರೀತಿಯ ವಾತಾವರಣದಲ್ಲೂ ಧರಿಸಬಹುದು. ಕಂಪ್ಯೂಟರ್ ನೆರವಿನ ಡಿಜಿಟಲ್ ಡಿಸ್ರೆಪ್ಟೀವ್ ಮಾದರಿಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಹೊಸ ಸಮವಸ್ತ್ರದಲ್ಲಿ ಶರ್ಟ್ ಅನ್ನು ಇನಶರ್ಟ್ ಮಾಡುವ ಅಗತ್ಯವಿಲ್ಲ. ಅಂದರೆ ಇನ್ನು ಮುಂದೆ ನಮ್ಮ ಆರ್ಮಿ ಡ್ರೆಸ್ ಇನ್ಶರ್ಟ್ ಇಲ್ಲದೇ ಇರಲಿದೆ.
ಹೊಸ ಸೇನಾ ಸಮವಸ್ತ್ರಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
“ನೆಹರೂ ಅವರು ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಕೊಡಲು ಮುಂದಾಗಿದ್ದರು”
ಯುಪಿ ರಸ್ತೆ ಅಪಘಾತದಲ್ಲಿ 9 ಮಂದಿ ಸಾವು: ಧನಸಹಾಯ ಘೋಷಿಸಿದ ಮೋದಿ
ನಮಗೆ ಯಾವಾಗಲೂ ಜನರು ಮೊದಲು: ಪೆಟ್ರೋಲ್ ಬೆಲೆ ಇಳಿಸಿದ ಬಳಿಕ ಪ್ರಧಾನಿ ಮೋದಿ ಹೇಳಿಕೆ
ಜನಸಾಮಾನ್ಯರಿಗೆ ಗುಡ್ ನ್ಯೂಸ್; ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!
ಜ್ಞಾನವಾಪಿ ಮಸೀದಿಯ ಶಿವಲಿಂಗದ ಬಗ್ಗೆ ಪೋಸ್ಟ್ ಹಾಕಿದ್ದ ಪ್ರಾಧ್ಯಾಪಕರಿಗೆ ಜಾಮೀನು ಮಂಜೂರು
ಅಕ್ರಮ ಫ್ಲಾಟ್ ನಿರ್ಮಾಣ: ನೋಟಿಸ್ ಜಾರಿ ಮಾಡಿದ ಬಿಎಂಸಿ