Connect with us


      




ಸಾಮಾನ್ಯ

ನ್ಯೂಜಿಲೆಂಡ್-ಆಸ್ಟ್ರೇಲಿಯಾ ಟಿ20 ಸರಣಿ ರದ್ದು.. ಕಾರಣವೇ ಗೊತ್ತಾ? 

UNI Kannada

Published

on

ಆಸ್ಟ್ರೇಲಿಯ : ಫೆಬ್ರವರಿ 09 (ಯು.ಎನ್.ಐ) ಮುಂದಿನ ತಿಂಗಳು ನಡೆಯಬೇಕಿದ್ದ ನ್ಯೂಜಿಲೆಂಡ್-ಆಸ್ಟ್ರೇಲಿಯಾ ಟಿ20 ಸರಣಿ ರದ್ದಾಗಿದೆ. ಈ ವಿಷಯವನ್ನ ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಅಧಿಕೃತವಾಗಿ ದೃಢಪಡಿಸಿದೆ. ನ್ಯೂಜಿಲೆಂಡ್‌ನಲ್ಲಿನ ಓಮಿಕ್ರಾನ್ ನಿಯಮಗಳ ಕಾರಣದಿಂದಾಗಿ ಎರಡೂ ಮಂಡಳಿಗಳ ಒಪ್ಪಿಗೆಯೊಂದಿಗೆ ಸರಣಿಯನ್ನು ರದ್ದುಗೊಳಿಸಲಾಗಿದೆ. ಇದಕ್ಕೂ ಮುನ್ನ ಎರಡೂ ದೇಶಗಳ ಉಭಯ ತಂಡಗಳ ನಡುವೆ ಟಿ20 ಸರಣಿಯನ್ನು ಆಯೋಜಿಸಲಾಗಿತ್ತು. ನ್ಯೂಜಿಲೆಂಡ್‌ನಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಾದ ಕಾರಣ ಸರ್ಕಾರವು ಮತ್ತೆ ನಿಯಮಗಳನ್ನು ಬಿಗಿಗೊಳಿಸಿತು.

ಇದಕ್ಕೂ ಮುಂಚೆ “ನಾವು ನ್ಯೂಜಿಲೆಂಡ್-ಆಸ್ಟ್ರೇಲಿಯಾ ಟಿ20 ಸರಣಿಯನ್ನು ನಿಗದಿಪಡಿಸಿದಾಗ ಎಲ್ಲವೂ ಸರಿಯಾಗಿತ್ತು. ಟ್ರಾನ್ಸ್-ಟ್ಯಾಸ್ಮನ್ ದೇಶಗಳ ನಡುವಿನ ಗಡಿ ಒಮಿಕ್ರಾನ್ ಕಡಿಮೆಯಾಗಿದ್ದ ಕಾರಣ ತೆರೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ಆದರೆ ದೇಶದಲ್ಲಿ ಓಮಿಕ್ರಾನ್‌ನ ಪರಿಸ್ಥಿತಿ ಏರಿಕೆಯಾಗಿದ್ದೂ ಜೊತೆಗೆ ಗಡಿಯಲ್ಲಿನ ನಿಯಮಗಳು ಹೆಚ್ಚು ಕಠಿಣವಾದವು. ಇಂಥ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಸರಣಿ ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು ಆದ್ದರಿಂದ ನಾವು ಸರಣಿಯನ್ನು ರದ್ದುಗೊಳಿಸಿದ್ದೇವೆ ಎಂದು ನ್ಯೂಜಿಲೆಂಡ್‌ನ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ವೈಟ್ ಹೇಳಿದ್ದಾರೆ.

Share