Published
6 months agoon
By
UNI Kannadaಕ್ರಿಸ್ಟ್ಚರ್ಚ್ , ಜ 9(ಯುಎನ್ಐ) ನ್ಯೂಜಿಲೆಂಡ್ನ ಸ್ಟಾರ್ ಬ್ಯಾಟ್ಸ್ಮನ್ ಡೆವೊನ್ ಕಾನ್ವೇ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆಡಿದ ಮೊದಲ ಐದು ಟೆಸ್ಟ್ ಗಳಲ್ಲಿ ಸತತ 50 ಪ್ಲಸ್ ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಬಾಂಗ್ಲಾ ದೇಶ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಕಾನ್ವೆ ಅರ್ಧ ಶತಕ ಗಳಿಸಿ ಈ ಘನತೆ ಪಡೆದುಕೊಂಡಿದ್ದಾರೆ. ಕಾನ್ವೆ ಈವರೆಗೆ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಐದೂ ಟೆಸ್ಟ್ ಗಳಲ್ಲಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ, ಮೂರು ಅರ್ಧ ಶತಕಗಳು ಸೇರಿವೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ 99 ರನ್ ಗಳಿಸಿದ್ದ ಕಾನ್ವೆ ಮೂರನೇ ಶತಕಕ್ಕೆ ಕೇವಲ ಒಂದು ರನ್ ಕೊರತೆಯಾಗಿದೆ.
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ ದ್ವಿಶತಕ ಸಿಡಿಸಿದ ಕಾನ್ವೆ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಅದೇ ರೀತಿ ಕಾನ್ವೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ವಿರುದ್ಧ 54 ರನ್ ಗಳಿಸಿ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದರು. ಬಾಂಗ್ಲಾದೇಶ-ನ್ಯೂಜಿಲೆಂಡ್ ಪಂದ್ಯದ ವಿಚಾರಕ್ಕೆ ಬಂದರೆ ಮೊದಲ ದಿನ ನ್ಯೂಜಿಲೆಂಡ್ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಮೊದಲ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿದೆ. ಲಾಥಮ್ 186 ರನ್ ಗಳಿಸಿ ದ್ವಿಶತಕದ ಹೊಸ್ತಿಲಲ್ಲಿದ್ದರೆ, ಕಾನ್ವೆ 99 ರನ್ ಗಳಿಸಿ ಶತಕಕ್ಕೆ ಕೇವಲ ಒಂದು ರನ್ ಅಂತರದಲ್ಲಿದ್ದರು.
ವಿಂಬಲ್ಡನ್ನ ಮೊದಲ ಸುತ್ತಿನಲ್ಲೇ ಹೊರಬಿದ್ದ ಸೆರೆನಾ!
ಕ್ರಿಕೆಟ್ಗೆ ಗುಡ್ ಬೈ ಹೇಳಿದ ಮೋರ್ಗಾನ್!
“ನನ್ನ ಖಾತೆಯಲ್ಲಿ ಒಲಿಂಪಿಕ್ ಪದಕವಿಲ್ಲ” : ಮನು ಭಾಕರ್
“ಹೆಚ್ಚು ಸಿಕ್ಸರ್ಗಳನ್ನು ಹೊಡೆಯಲು ಆತನಿಗೆ ಬ್ಯಾಟ್ ನೀಡಿದ್ದೇನೆ”: ಪಾಂಡ್ಯ
ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮಧ್ಯಪ್ರದೇಶ; ಆರ್ ಸಿಬಿ .. ಆರ್ ಸಿಬಿ ಎಂಬ ಕೂಗು
ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಕೋವಿಡ್ ಸೋಂಕು!