Connect with us


      




ದೇಶ

ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ

Iranna Anchatageri

Published

on

ಹೊಸದಿಲ್ಲಿ: ಜೂನ್ 29 (ಯು.ಎನ್.ಐ.) ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಅಂಗಡಿಯೊಬ್ಬನ ಭೀಕರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಳ್ಳುವಂತೆ ಗೃಹ ಸಚಿವಾಲಯ ಆದೇಶಿಸಿದೆ .

ಈ ಪ್ರಕರಣದಲ್ಲಿ ಉಗ್ರಗಾಮಿ ಅಥವಾ ಭಯೋತ್ಪಾದಕ ಸಂಘಟನೆಗಳು ಮತ್ತು ವಿದೇಶಿ ಪಿತೂರಿಗಳು ನಡೆದಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆ ತನಿಖೆ ನಡೆಸಲಿದೆ.

ಕನ್ಹಯ್ಯಾ ಲಾಲ್ ಎಂಬುವರನ್ನು ಮಂಗಳವಾರ ಇಬ್ಬರು ದುಷ್ಕರ್ಮಿಗಳು ಆತನ ತಲೆಯನ್ನು ಕತ್ತರಿಸಿ ಹತ್ಯೆ ಮಾಡಿದ್ದರು. ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿರುವ ಕಾರಣ ಕನ್ಹಯ್ಯಲಾಲ್ ನನ್ನು ಹತ್ಯೆ ಮಾಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೊಲೆ ಬಳಿಕ ದುಷ್ಕರ್ಮಿಗಳು ವಿಡಿಯೋವನ್ನು ಅಪ್ ಲೋಡ್ ಮಾಡಿದ್ದರು.

ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ರಾಜಸ್ಥಾನ ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ. ಘಟನೆ ನಡೆದ ಕೂಡಲೇ ಕೇಂದ್ರವು ನಾಲ್ವರು ಸದಸ್ಯರ ಎನ್‌ಐಎ ತಂಡವನ್ನು ಉದಯಪುರಕ್ಕೆ ರವಾನಿಸಿದೆ.

Share