Connect with us


      




ದೇಶ

ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ ಜಾರಿ; ಮದುವೆಗೆ 50 ಮಂದಿಗೆ ಅವಕಾಶ

Vanitha Jain

Published

on

ನವದೆಹಲಿ: ಜನೆವರಿ 08 (ಯು.ಎನ್.ಐ.) ಮುಂಬೈನಲ್ಲಿ ಕೇವಲ 24 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು. ಕೊವಿಡ್‍ನಿಂದಾಗಿ ಒಂದೇ ದಿನ ಏಳು ಮಂದಿ ಸಾವನ್ನಪ್ಪಿದ್ದಾರೆ.  ಈ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದು, ಫೆಬ್ರವರಿ 15ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಿದೆ.

ರಾತ್ರಿ 11 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹೇರಿರುವ ಸರ್ಕಾರ ಒಂದೆಡೆ ಐದಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಹೇಳಿದೆ. ಇನ್ನು ಮದುವೆ ಮತ್ತು ಇತರೆ ಸಮಾರಂಭಗಳಿಗೆ 50 ಮಂದಿಗೆ ಅವಕಾಶ ನೀಡಲಾಗಿದೆ. ಅಂತ್ಯಸಂಸ್ಕಾರಕ್ಕೆ 20 ಜನರಿಗೆ ಅನುಮತಿ ನೀಡಿದೆ.

ಜಿಮ್, ಸ್ಪಾ, ಸ್ವಿಮ್ಮಿಂಗ್ ಪೂಲ್, ಸಂಗ್ರಹಾಲಯಗಳನ್ನು ಮುಚ್ಚುವಂತೆ ಆದೇಶ ನೀಡಿದೆ. ಇನ್ನು ಶಾಪಿಂಗ್ ಮಾಲ್, ರೆಸ್ಟೋರೆಂಟ್‍ಗಳಲ್ಲಿಯೂ ಶೇ 50 ರಷ್ಟು ಮಂದಿಯಷ್ಟೇ ಕಾರ್ಯನಿರ್ವಹಿಸಬೇಕು, ರಾತ್ರಿ 10 ಗಂಟೆಯಿಂದ 8 ಗಂಟೆಯವರೆಗೆ ತೆರೆಯುವಂತಿಲ್ಲ.

ಮುಂಬೈನಲ್ಲಿ ಶನಿವಾರ 20,318 ಹೊಸ ಕೋವಿಡ್ ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿವೆ. ಶನಿವಾರ ಸಂಜೆಯ ಹೊತ್ತಿಗೆ ಸಕ್ರಿಯ ಪ್ರಕರಣಗಳು 1,06,037. ರೋಗಲಕ್ಷಣಗಳಿಲ್ಲದ ಒಟ್ಟು ರೋಗಿಗಳ ಸಂಖ್ಯೆ 82 ಪ್ರತಿಶತ ಮತ್ತು ಹಾಸಿಗೆಯ ಅವಶ್ಯಕತೆ ಇರುವವರು 21.4 ಪ್ರತಿಶತದಷ್ಟಿದೆ. ಮಹಾರಾಷ್ಟ್ರದಲ್ಲಿ 41,434 ಹೊಸ ಕೋವಿಡ್ ಪ್ರಕರಣಗಳು ಮತ್ತು 13 ಸಾವುಗಳು ದಾಖಲಾಗಿವೆ. ಶನಿವಾರ ಒಟ್ಟು 9,671 ಮಂದಿ ಚೇತರಿಸಿಕೊಂಡಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,73,238 ಆಗಿದೆ.

Share