Connect with us


      




ಸಿನೆಮಾ

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಟ ನೀನಾಸಂ ಸತೀಶ್!

Iranna Anchatageri

Published

on

ಬೆಂಗಳೂರು: ಜೂನ್ 27 (ಯು.ಎನ್.ಐ.) ನಟ ನಿನಾಸಂ ಸತೀಶ್ ಅಭಿನಯಿಸಿರುವ ಡಿಯರ್ ವಿಕ್ರಮ್ ಚಿತ್ರ ಇದೇ ಗುರುವಾರದಂದು ತೆರೆ ಕಾಣಲಿದೆ.  ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿನಾಸಂ ಸತೀಶ್ ಇಂದು ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಈ ವೇಳೆ ನಿನಾಸಂ ಸತೀಶ್ ಜೂನ್ 30 ರಂದು ತೆರೆ ಕಾಣಲಿರುವ, ತಾವೇ ನಾಯಕ ನಟರಾಗಿ ಅಭಿನಯಿಸಿರುವ ಡಿಯರ್ ವಿಕ್ರಮ್ ಸಿನಿಮಾ ವೀಕ್ಷಿಸಲು ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.

ಕೆ.ಎಸ್. ನಂದೀಶ್ ನಿರ್ದೇಶನದ ಈ ಸಿನಿಮಾ ನಾಯಕತ್ವದ ಪ್ರಗತಿಪರ ಆಶಯಗಳನ್ನು ಒಳಗೊಂಡಿದೆ ಎಂದು ಸತೀಶ್ ವಿವರಿಸಿದರು. ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲೆಂದು ಹಾರೈಸಿದ ಸಿದ್ದರಾಮಯ್ಯ ಅವರು ಇಡೀ ಚಿತ್ರ ತಂಡಕ್ಕೆ ಶುಭ ಕೋರಿದರು. ಸಾಹಿತಿ ನಟರಾಜ್ ಹುಳಿಯಾರ್ ಇದೇ ವೇಳೆ ಹಾಜರಿದ್ದರು.

Share