Published
5 months agoon
By
Vanitha Jainಸ್ಯಾಂಟೋ ಡೊಮಿಂಗೊ, ಡಿಸೆಂಬರ್ 16, (ಯು.ಎನ್.ಐ) ಡೊಮಿನಿಕನ್ ರಿಪಬ್ಲಿಕ್ ರಾಜಧಾನಿ ಸ್ಯಾಂಟೊ ಡೊಮಿಂಗೊದಲ್ಲಿರುವ ಲಾಸ್ ಅಮೆರಿಕಸ್ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನವೊಂದು ಪತನಗೊಂಡು ಪೋರ್ಟೊ ರಿಕನ್ ಸಂಗೀತ ನಿರ್ಮಾಪಕ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವಿಮಾನದ ಮಾಲೀಕ ಹೆಲಿಡೋಸಾ ಹೇಳಿದ್ದಾರೆ.
“ಲಾಸ್ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ವಿಷಾದ ವ್ಯಕ್ತಪಡಿಸುತ್ತದೆ..ಈ ದುರಂತದಲ್ಲಿ ವಿಮಾನದಲ್ಲಿ ಇದ್ದವರೆಲ್ಲಾ ಸಾವನ್ನಪ್ಪಿದ್ದಾರೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಲ್ಯಾಟಿನ್ ಸಂಗೀತ ನಿರ್ಮಾಪಕ ಜೋಸ್ ಏಂಜೆಲ್ ಹೆರ್ನಾಂಡೆಜ್ (38), ಅವರು “ಫ್ಲೋ ಲಾ ಮೂವಿ” ಮೂಲಕ ಮುನ್ನೆಲೆಗೆ ಬಂದವರು ಮತ್ತು “ಟೆ ಬೋಟೆ” ನಂತಹ ಹಿಟ್ ಸಂಗೀತ ನೀಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ. ಜೋಸ್ ಏಂಜೆಲ್ ಹೆರ್ನಾಂಡೆಜ್ ಯುನೈಟೆಡ್ ಸ್ಟೇಟ್ಸ್ ಮತ್ತು ಪ್ರಪಂಚದಾದ್ಯಂತ ಅನುಯಾಯಿಗಳನ್ನು ಗಳಿಸಿದ್ದು, ಕೆರಿಬಿಯನ್ನಲ್ಲಿ ಜನಪ್ರಿಯವಾಗಿರುವ ಸಂಗೀತ ಪ್ರಕಾರವಾದ ರೆಗೆಟನ್ನಲ್ಲಿ ಹೆಸರು ಮಾಡಿದ್ದರು.
ಹೆರ್ನಾಂಡೆಜ್ ಜೊತೆಗೆ ಅವರ ಮಗ ಮತ್ತು ಪಾಲುದಾರ ಕೂಡ ಸೇರಿದ್ದಾರೆ ಮತ್ತು ಸತ್ತವರಲ್ಲಿ ಇಬ್ಬರು ನಾಲ್ಕು ಮತ್ತು 13 ವರ್ಷ ವಯಸ್ಸಿನ ಅಪ್ರಾಪ್ತರು ಎಂದು ತಿಳಿದು ಬಂದಿದೆ. ವಿಮಾನದಲ್ಲಿದ್ದ ಆರು ಪ್ರಯಾಣಿಕರು ಅಮೆರಿಕದ ಪ್ರಜೆಗಳಾಗಿದ್ದು, ಸಿಬ್ಬಂದಿಯಲ್ಲಿ ಇಬ್ಬರು ಪೈಲಟ್ಗಳು ಮತ್ತು ಫ್ಲೈಟ್ ಸ್ಟೀವರ್ಡ್ ಇದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಡೊಮಿನಿಕನ್ ರಿಪಬ್ಲಿಕ್ ರಾಜಧಾನಿಯ ಸಮೀಪವಿರುವ ಮತ್ತೊಂದು ವಿಮಾನ ನಿಲ್ದಾಣದಿಂದ ಯುಎಸ್ ರಾಜ್ಯ ಫ್ಲೋರಿಡಾಕ್ಕೆ ಟೇಕ್ ಆಫ್ ಆದ ನಂತರ ಅಸಮರ್ಪಕ ಕಾರ್ಯದಿಂದಾಗಿ ಗಲ್ಫ್ ಸ್ಟ್ರೀಮ್ ವಿಮಾನವು ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದಾಗ ಪತನಗೊಂಡಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಅಪಘಾತದ ನಂತರ ಲಾಸ್ ಅಮೇರಿಕಾ ವಿಮಾನ ನಿಲ್ದಾಣವು ಎರಡು ಗಂಟೆಗಳ ಕಾಲ ಚಟುವಟಿಕೆಯನ್ನು ಸ್ಥಗಿತಗೊಳಿಸಿತು. ನಂತರ ಸಾಮಾನ್ಯ ಕಾರ್ಯಾಚರಣೆಯನ್ನು ಪುನರಾರಂಭಿಸಿತು.
ಲಂಡನ್: ಕರ್ನಾಟಕದ ಸಾವಿರ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆ
ಶ್ರೀಲಂಕಾದಲ್ಲಿ ಇಂಧನ ಕಳ್ಳ ದಂಧೆಕೋರರ ಮೇಲೆ ದಾಳಿ!
“ಲಡಾಖ್ನಲ್ಲಿ ಉಕ್ರೇನ್ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್ನಲ್ಲಿ ಹೇಳಿಕೆ
ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ತೆರವುಗೊಳಿಸಿದ ಸರ್ಕಾರ
ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್
ಕಾನ್ ಚಲನಚಿತ್ರೋತ್ಸವ 2022; ರೆಡ್ ಕಾರ್ಪೆಟ್ ಮೇಲೆ ‘ಅತ್ಯಾಚಾರ’ದ ಪ್ರತಿಭಟನೆ!