Connect with us


      




ದೇಶ

ನಿರ್ಭಯಾ ಪ್ರಕರಣ ಬಳಿಕ ಎಷ್ಟು ಮಹಿಳೆಯರು ಸೇಫ್?ಏನನ್ನುತ್ತದೆ ಸಮೀಕ್ಷೆ?

UNI Kannada

Published

on

ನವದೆಹಲಿ,ಡಿ.16(ಯು.ಎನ್.ಐ) 2012ರಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ನಿರ್ಭಯಾ ಪ್ರಕರಣ ನಡೆದು 9ವರ್ಷಗಳು ಕಳೆದಿವೆಯಾದರೂ ಇಂದಿಗೂ ಅದೆಷ್ಟೋ ಯುವತಿಯರು,ಮಹಿಳೆಯರು,ಹುಡುಗಿಯರು ಇಂತಹ ಕ್ರೌರ್ಯಕ್ಕೆ ಒಳಗಾಗುತ್ತಲೇಯಿದ್ದಾರೆ.

ಅನೇಕ ನಿರ್ಭಯಾಗಳು ತಮ್ಮ ಸ್ವಂತ ಮನೆಗಳಲ್ಲಿ ಅತ್ಯಾಚಾರವನ್ನು ಎದುರಿಸುತ್ತಿರೆ,ಮತ್ತೊಂದಿಷ್ಟು ಮನೆಯ ಹೊರಗೆ.ಈ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಪರಿಸ್ಥಿತಿಗಳು, ವ್ಯವಸ್ಥೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಿ ಮಹಿಳೆಯರು ಸುರಕ್ಷಿತವಾಗಿರುತ್ತಾರೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ನಿಜವಾಗಿಯೂ ಈ ರೀತಿಯ ಏನಾದರೂ ಸಂಭವಿಸಿದೆಯೇ? ಇವತ್ತಿಗೂ ಬಹುಶಃ ‘ಇಲ್ಲ’ ಎಂಬುದೇ ಉತ್ತರ.

9 ವರ್ಷಗಳಲ್ಲಿ ಏನು ಬದಲಾಗಿದೆ? ಮಹಿಳೆಯರು ಮತ್ತು ಹುಡುಗಿಯರು ರಸ್ತೆಗಳಲ್ಲಿ ಮತ್ತು ಮನೆಯಲ್ಲಿ ಸುರಕ್ಷಿತವಾಗಿದ್ದಾರೆಯೇ?ಈ ಬಗೆಗಿನ ಅಧ್ಯಯನಕ್ಕೆ ಖಾಸಗಿ ವಾಹಿನಿಯೊಂದು ‘ಸೇಫ್ ಇಂಡಿಯಾ’ ಹೆಸರಿನಲ್ಲಿ ಸಮೀಕ್ಷೆ ನಡೆಸಿದ್ದು,ಈ ಆನ್‌ಲೈನ್ ಸಮೀಕ್ಷೆಯಲ್ಲಿ ಹೆಚ್ಚಿನ ಯುವಕರು ಭಾಗವಹಿಸಿದ್ದರು. ಈ ಸಮೀಕ್ಷೆಯ ಫಲಿತಾಂಶಗಳು ಆಘಾತಕಾರಿ. ವಾಸ್ತವವಾಗಿ, 12.2% ರಷ್ಟು ಮಾತ್ರ ದೇಶದಲ್ಲಿ ಹೆಣ್ಣುಮಕ್ಕಳು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಎಂದು ಕೆಲವರು ಹೇಳಿದರೆ ರಷ್ಟು ಜನರು ದೇಶದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ ಎಂದು ನಂಬುತ್ತಾರೆ. ಇದಲ್ಲದೇ ಶೇ.38.1ರಷ್ಟು ಜನ ಮಹಿಳೆಯರು ಸ್ವಲ್ಪ ಮಟ್ಟಿಗೆ ಸುರಕ್ಷಿತರು ಎಂದು ನಂಬಿದ್ದಾರೆ.

15 ರಿಂದ 28 ವಯಸ್ಸಿನ 54.7 ಪ್ರತಿಶತ ಯುವಕರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, 29 ರಿಂದ 41 ವರ್ಷ ವಯಸ್ಸಿನ 34.5 ರಷ್ಟು ಜನರು ಮತ್ತು 42 ವರ್ಷಕ್ಕಿಂತ ಮೇಲ್ಪಟ್ಟ ಶೇಕಡ 10.9 ರಷ್ಟು ಜನರು ಇದರಲ್ಲಿ ಭಾಗವಹಿಸಿದ್ದಾರೆ. ಅತ್ಯಧಿಕ ಉದ್ಯೋಗ ಅಥವಾ ವ್ಯಾಪಾರ ಅಂದರೆ ಕೆಲಸ ಮಾಡುವ 58 ಪ್ರತಿಶತ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.ಇನ್ನು 33 ಪ್ರತಿಶತ ವಿದ್ಯಾರ್ಥಿಗಳು ಮತ್ತು 9 ಪ್ರತಿಶತ ದೇಶೀಯ ಜನರು ಭಾಗವಹಿಸಿದರು. ಇದರಲ್ಲಿ ಶೇ.81ರಷ್ಟು ಪುರುಷರು ಮತ್ತು ಶೇ.19ರಷ್ಟು ಹುಡುಗಿಯರು ಎಂಬುದು ಗಮನಾರ್ಹ. ಯಾವ ಯಾವ ಪ್ರಶ್ನೆಗಳನ್ನು ಮುಂದಿಟ್ಟು ಸಮೀಕ್ಷೆ ನಡೆಸಲಾಯಿತೆಂದರೆ,

ಎಷ್ಟು ಕುಟುಂಬ ಮತ್ತು ನಿಕಟ ಜನರಿಗಿಂತ ಮಹಿಳೆಯರು ಹೆಚ್ಚು ಅಪಾಯದಲ್ಲಿದ್ದಾರೆ?

ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲೆ ಕೆಟ್ಟ ಕಣ್ಣಿಡುವ ಬಹುತೇಕರು ಅವರಿಗೆ ಹತ್ತಿರದವರೇ ಆಗಿದ್ದಾರೆ.ಹೀಗೆ ಕೆಟ್ಟ ದೃಷ್ಟಿಯುಳ್ಳವರು ಕುಟುಂಬ ಅಥವ ಕುಟುಂಬದ ಸದಸ್ಯರೊಂದಿಗೆ ನಿಕಟವಾಗಿರುತ್ತಾರೆ ಎಂಬುದು ಈ ಸಮೀಕ್ಷೆಯಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಸಮೀಕ್ಷೆಯ ಪ್ರಕಾರ, ಮಹಿಳೆಯರ ಬಗ್ಗೆ ಕೆಟ್ಟ ದೃಷ್ಟಿ ಹೊಂದಿರುವ ನಿಕಟ ಜನರ ಸಂಖ್ಯೆ ಸುಮಾರು 67 ಪ್ರತಿಶತ. ಇವರಲ್ಲಿ ಶೇಕಡ 49ರಷ್ಟು ಮಂದಿಯನ್ನು ಗುರುತಿಸಲಾಗಿದ್ದು, ಶೇಕಡ 18ರಷ್ಟು ಮಂದಿ ಮನೆಮಂದಿಗೆ ತುಂಬಾ ಹತ್ತಿರವಾಗಿದ್ದಾರೆ.

ಎಲ್ಲೆಲ್ಲೂ ಗಂಡಸರೇ ಜೊತೆಗೆ ಇರಬೇಕೇ?

ಈ ಸಮೀಕ್ಷೆಯ ಪ್ರಕಾರ, ಕೇವಲ 13 ಪ್ರತಿಶತದಷ್ಟು ಜನರು ಹುಡುಗಿಯರು ಸುರಕ್ಷಿತವಾಗಿ ಎಲ್ಲಿ ಬೇಕಾದರೂ ಹೋಗಬಹುದು ಎಂದರೆ, 53.7 ರಷ್ಟು ಹೆಣ್ಣುಮಕ್ಕಳು ಮಾತ್ರ ಎಲ್ಲಿಯೂ ಸುರಕ್ಷಿತವಾಗಿ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಲ್ಲದೇ ಇಂದಿಗೂ ಶೇ.33ಕ್ಕೂ ಹೆಚ್ಚು ಮಂದಿ ಹೆಣ್ಣುಮಗುವನ್ನು ಎಲ್ಲೋ ದೂರಕ್ಕೆ ಕಳುಹಿಸಬೇಕಾದರೆ ಪುರುಷ ಸದಸ್ಯರನ್ನು ಹೊಂದಿರಲೇಬೇಕು ಎಂದು ನಂಬಿದ್ದಾರೆ.

ಸಂತ್ರಸ್ತರ ಬಗ್ಗೆ ಪೊಲೀಸರು ಸೂಕ್ಷ್ಮವಾಗಿ ವರ್ತಿಸಿದ್ದಾರೆಯೇ?

ನಿರ್ಭಯಾ ಪ್ರಕರಣದ ನಂತರ ಪ್ರತಿಯೊಂದು ಅಂಶದಲ್ಲೂ ಬದಲಾವಣೆಗಳನ್ನು ನಿರೀಕ್ಷಿಸಲಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಪೊಲೀಸರು ಸಂತ್ರಸ್ತೆಯ ಜೊತೆಗೆ ಹೇಗೆ ವರ್ತಿಸುತ್ತಾರೆ ಎಂಬುದರ ಬಗ್ಗೆ ಪೊಲೀಸರು ಎಷ್ಟು ಗಂಭೀರವಾಗಿರುತ್ತಾರೆ ಎಂಬುದೂ ಇದರಲ್ಲಿ ಒಂದು. ಈ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, 56.8 ರಷ್ಟು ಜನರು ಬಹಳ ಕಡಿಮೆ ಬದಲಾಗಿದೆ ಎಂದು ನಂಬುತ್ತಾರೆ. 38 ರಷ್ಟು ಜನರು ಸ್ವಲ್ಪ ಬದಲಾವಣೆಯಾಗಿದೆ ಎಂದು ಹೇಳಿದ್ದಾರೆ. ಇದಲ್ಲದೆ, ನಿರ್ಭಯಾ ಘಟನೆಯ ನಂತರ ಪೊಲೀಸರ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂದು ಕೇವಲ 5.2 ಪ್ರತಿಶತ ಜನರು ಮಾತ್ರ ನಂಬಿದ್ದಾರೆ.

ಎಷ್ಟು ಜನರು ಪ್ಯಾನಿಕ್ ಬಟನ್ ಮತ್ತು SOS ಅನ್ನು ಬಳಸುತ್ತಾರೆ?

ಸುಮಾರು 68 ಪ್ರತಿಶತ ಜನರು ತಾವು ಯಾವುದೇ ಪ್ಯಾನಿಕ್ ಬಟನ್ ಅಥವಾ SOS ಅನ್ನು ವಿಪರೀತ ಸಂದರ್ಭಗಳಲ್ಲಿ ಬಳಸುವುದಿಲ್ಲ ಅಥವಾ ಅವರಿಗೆ ಅದರ ಬಗ್ಗೆ ತಿಳಿದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕೇವಲ 32 ಪ್ರತಿಶತ ಜನರು ತುರ್ತು ಪ್ಯಾನಿಕ್ ಬಟನ್ ಅನ್ನು ಹೇಗೆ ಬಳಸಬೇಕೆಂದು ತಿಳಿದಿದ್ದಾರಂತಷ್ಟೆ.

ಅತ್ಯಾಚಾರ ನಡೆಯಲು ಹುಡುಗಿಯರು ಧರಿಸುವ ದಿರಿಸು ಹೊಣೆಯೇ?

ಸಾಮಾನ್ಯವಾಗಿ ಅತ್ಯಾಚಾರ ಪ್ರಕರಣಗಳು ಬಂದಾಗ ಕೆಲವರು ಇದಕ್ಕಾಗಿ ಹುಡುಗಿಯರ ಸ್ವಾತಂತ್ರ್ಯ ಮತ್ತು ಅವರು ಧರಿಸುವ ಬಟ್ಟೆಗಳನ್ನು ಪ್ರಶ್ನಿಸುತ್ತಾರೆ. ಈ ಕುರಿತ ಸಮೀಕ್ಷೆಯ ಫಲಿತಾಂಶ ನೋಡಿದರೆ ಜನಕ್ಕೆ ಹಾಗನ್ನಿಸುವುದಿಲ್ಲ. ವಾಸ್ತವವಾಗಿ, ಕೇವಲ 6 ಪ್ರತಿಶತದಷ್ಟು ಜನರು ಇಂತಹ ಘಟನೆಗಳ ಹಿಂದೆ ಹುಡುಗಿಯರ ಬಟ್ಟೆ ಕಾರಣ ಎಂದು ನಂಬಿದ್ದಾರೆ. 46.7 ರಷ್ಟು ಜನರು ಇಂತಹ ಘಟನೆಗಳ ಹಿಂದೆ ಜನರ ಕೊಳಕು ಚಿಂತನೆ ದೃಷ್ಟಿಕೋನವೇ ಮುಖ್ಯ ಕಾರಣ ಎಂದಿದ್ದಾರೆ. ಇದಲ್ಲದೆ, ಬೇಗನೇ ಸರಿಯಾಗಿ ಅಪರಾಧಿಗೆ ಸಮರ್ಪಕ ಶಿಕ್ಷದ ವಿಧಿಸದ ಕಾನೂನು ಹಾಗೂ ಸುದೀರ್ಘ ಕಾನೂನು ಪ್ರಕ್ರಿಯೆಯಿಂದಾಗಿ ಅಪರಾಧಿಗಳು ನಿರ್ಭೀತರಾಗಿದ್ದಾರೆ ಎಂದು 47.3 ಪ್ರತಿಶತ ಜನರು ಹೇಳಿದ್ದಾರೆ.

ಇಂಟರ್‌ನೆಟ್ ಕೂಡ ಮಹಿಳೆಯರ ಶೋಷಣೆಯ ಸಾಧನವೇ?

ಸೋಷಿಯಲ್ ಮೀಡಿಯಾ ಮತ್ತು ಇಂಟರ್‌ನೆಟ್ ಕೂಡ ಮಹಿಳೆಯರ ಶೋಷಣೆಯ ಪ್ರಮುಖ ಸಾಧನಗಳಾಗಿವೆ. ಇದಕ್ಕೆ ಸಂಬಂಧಿಸಿದ ಪ್ರಶ್ನೆಗೆ, ಶೇಕಡಾ 67.2 ರಷ್ಟು ಜನರು ಹೌದು ಎಂದಿದ್ದಾರಡ. ಆನ್‌ಲೈನ್ ಮೂಲಕ ಹುಡುಗಿಯರನ್ನು ವಿಶೇಷವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 19.5 ರಷ್ಟು ಜನರು ಅಂತರ್ಜಾಲದಲ್ಲಿ ಹುಡುಗಿಯರಿಗೆ ಹೆಚ್ಚು ಕಿರುಕುಳ ಮತ್ತು ಭಾವನಾತ್ಮಕವಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ನಂಬುತ್ತಾರೆ. ಇನ್ನು 13.3 ಶೇಕಡಾ ಜನರು ಆನ್‌ಲೈನ್‌ನಲ್ಲಿ ಹುಡುಗಿಯರಿಗೆ ಕಿರುಕುಳ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

Share