Connect with us


      




ದೇಶ

ನಾಗರಿಕರ ಕೋಪಕ್ಕೆ ಗುರಿಯಾದ ಮಲಬಾರ್ ಗೋಲ್ಡ್ ಜಾಹೀರಾತು

Vanitha Jain

Published

on

ನವದೆಹಲಿ: ಏಪ್ರಿಲ್ 22 (ಯು.ಎನ್.ಐ.) ಹಣೆಯ ಮೇಲೆ ಬಿಂದಿ ಇಲ್ಲದೆ ಕಾಣಿಸಿಕೊಂಡಿರುವ ಕರೀನಾ ಕಪೂರ್-ಖಾನ್ ಅವರನ್ನು ಒಳಗೊಂಡ ಮಲಬಾರ್ ಗೋಲ್ಡ್ ಜಾಹೀರಾತು ನಾಗರಿಕರ ಕೋಪಕ್ಕೆ ಗುರಿಯಾಗಿದೆ.

ಮಲಬಾರ್ ಗೋಲ್ಡ್ ಅಕ್ಷಯ ತೃತೀಯ ದಿನಕ್ಕೆಂದು ತಮ್ಮ ಕಂಪೆನಿಯ ಬಂಗಾರದ ಪ್ರಚಾರಕ್ಕಾಗಿ ಜಾಹೀರಾತು ಮಾಡಿದೆ. ಜಾಹೀರಾತಿನಲ್ಲಿ, ಕರೀನಾ ಗುಲಾಬಿ ಬಣ್ಣದ ಲೆಹಂಗಾವನ್ನು ಧರಿಸಿ, ವಿಸ್ತಾರವಾದ ಡೈಮಂಡ್ ನೆಕ್ ಪೀಸ್, ಕಿವಿಯೋಲೆಗಳು ಮತ್ತು ಮಾಂಗ್ ಟಿಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಆಕೆಯ ಹಣೆಯ ಮೇಲೆ ಬಿಂದಿ ಇಲ್ಲದಿರುವುದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ.

ಹಣೆ ಬೊಟ್ಟು ಇಲ್ಲದ ಕಾರಣ ಬಹುಪಾಲು ಹಿಂದೂಗಳು ಈ ಜಾಹೀರಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಇದು ಹಿಂದೂ ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಕಡೆಗಣಿಸುವ ಪ್ರಯತ್ನ ಎಂದು ಕರೆದಿದ್ದಾರೆ.

ಹಣೆಯ ಮೇಲೆ ಬಿಂದಿಯನ್ನು ಧರಿಸುವುದು ಮಹಿಳೆಯರಿಗೆ, ವಿಶೇಷವಾಗಿ ವಿವಾಹಿತರಿಗೆ ಸಾಂಪ್ರದಾಯಿಕ ಭಾರತೀಯ ಉಡುಪಿನ ಪ್ರಮುಖ ಅಂಶವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮುಸ್ಲಿಮರನ್ನು ಮದುವೆಯಾದ ಕರೀನಾ ಹಿಂದೂ ಹಬ್ಬದ ಜಾಹೀರಾತಿನಲ್ಲಿ ಬಿಂದಿ ಇಲ್ಲದೆ ಕಾಣಿಸಿಕೊಂಡಿದ್ದಕ್ಕಾಗಿ ಬಳಕೆದಾರರು ಟ್ರೋಲ್ ಮಾಡಿದ್ದಾರೆ.

ಬಳಕೆದಾರರೊಬ್ಬರು, “ಮಲಬಾರ್ ಗೋಲ್ಡ್ ಅಕ್ಷಯ ತೃತೀಯದ ಮಂಗಳಕರ ದಿನದಂದು ತಮ್ಮ ಆಭರಣಗಳನ್ನು ಪ್ರಚಾರ ಮಾಡುತ್ತಿದೆ, ಕರೀನಾ ಕಪೂರ್ ಖಾನ್ ಬಿಂದಿ ಇಲ್ಲದೆ @ Malabartweets ಕಾಣಿಸಿಕೊಂಡಿದ್ದು, ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನು ಕಡೆಗಣಿಸಿ ಹಿಂದೂಗಳು ತಮ್ಮ ಹಣವನ್ನು ತಮ್ಮೊಂದಿಗೆ ಖರ್ಚು ಮಾಡಬೇಕೆಂದು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Share