Connect with us


      
ಕರ್ನಾಟಕ

ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಕರ್ಫ್ಯೂ ಹಾಕಿಲ್ಲ – ಆರಗ ಜ್ಞಾನೇಂದ್ರ

Iranna Anchatageri

Published

on

ಬೆಂಗಳೂರು : ಜನವರಿ ೦8 (ಯು.ಎನ್.ಐ) ರಾಜ್ಯದಲ್ಲಿ ಕಾಂಗ್ರೆಸ್ ಕೈಗೊಂಡಿರುವ ಮೇಕೆದಾಟು ಪಾದಯಾತ್ರೆ ಹತ್ತಿಕ್ಕಲು ಸರ್ಕಾರ 144 ಸೆಕ್ಷನ್ ಜಾರಿಗೆ ತಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ನವರು ಪಾದಯಾತ್ರೆ ಮಾಡಬಾರದು ಅಂತ ನಾವು ಹೇಳೋದಿಲ್ಲ. ಆದ್ರೆ ಯಾವ ಟೈಂ ಇದು ಅಂತ ವಿವೇಚನೆ ಮಾಡಬೇಕಾಗುತ್ತೆ. ಇದು ಇಡಿ ರಾಜ್ಯದ ಸಾವು ನೋವಿನ ಪ್ರಶ್ನೆ. ಈಗ್ಲೂ ಆಲೋಚನೆ ಮಾಡ್ಲಿ ಇದರಿಂದ ಸಹನುಭೂತಿಯೇನು ಬರೋದಿಲ್ಲ. 144 ಸೆಕ್ಷನ್ ಉದ್ದೇಶಪೂರ್ವಕವಾಗಿ ಹಾಕಿಲ್ಲ. ಟೂರಿಸಿಂ ಪ್ಲೇಸ್ ನಲ್ಲಿ ಜನ ತೆರಳ್ತಾರೆ ಅನ್ನೋ ಕಾರಣಕ್ಕೆ ಹಾಕಲಾಗಿದೆ ಅಷ್ಟೇ. ಇದರಲ್ಲಿ ಯಾವುದೇ ಬೇರೆ ದುರುದ್ದೇಶವಿಲ್ಲ. ಉತ್ತರಪ್ರದೇಶದಲ್ಲಿ ಮೋದಿ ಕಾರ್ಯಕ್ರಮವೇ ರದ್ದಾಗಿದೆ. ನಮ್ಮಲ್ಲಿ ನಂದಿ ಹಿಲ್ಸ್ ನಡೆಯಬೇಕಿದ್ದ ಕಾರ್ಯಕ್ರಮವೂ ಸಹ ರದ್ದು ಮಾಡಿದ್ದೇವೆ. ಜನರು ಬದುಕೋದು ಮುಖ್ಯ ರಾಜಕಾರಣ ಆಮೇಲೆ ಎಂದರು.

ಇನ್ನು ಸಂಕ್ರಾಂತಿ ಬಳಿಕ ಕೋವಿಡ್ ಮಾರ್ಗಸೂಚಿ ಬದಲಾಗುತ್ತಾ ಅನ್ನೋ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಜ್ಞರು ನೀಡಿದ ವರದಿಯ ಬಳಿಕ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

Share