Connect with us


      
ರಾಜಕೀಯ

ಜನೆವರಿ 15ರವರೆಗೆ ಎಲ್ಲಾ ರ‍್ಯಾಲಿಗಳಿಗೂ ನಿಷೇಧ ಹೇರಿದ ಚುನಾವಣಾ ಆಯೋಗ

Vanitha Jain

Published

on

ನವದೆಹಲಿ: ಜನೆವರಿ 08 (ಯು.ಎನ್.ಐ.) ದೇಶದ ಕೆಲವು ಭಾಗಗಳಲ್ಲಿ ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಎಲ್ಲಾ ಭೌತಿಕ ರ‍್ಯಾಲಿಗಳು, ರೋಡ್‍ಶೋಗಳು ಮತ್ತು ಪಾದಯಾತ್ರೆಗಳನ್ನು ಜನವರಿ 15 ರವರೆಗೆ ನಿಷೇಧಿಸಿದೆ.

ಚುನಾವಣಾ ಪ್ರಾಧಿಕಾರವು ಜನವರಿ 15 ರಂದು ಪರಿಸ್ಥಿತಿಯನ್ನು ಅವಲೋಕಿಸಿ ತದನಂತರ ನಿಷೇಧವನ್ನು ವಿಸ್ತರಿಸಬೇಕೆ ಅಥವಾ ಹಿಂಪಡೆಯಬೇಕೆ ಎಂಬುದರ ಕುರಿತು ನಿರ್ಧಾರ ಮಾಡಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.

ಉಲ್ಲಂಘನೆ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಿಫಲವಾದಲ್ಲಿ ಅಧಿಕಾರಿಗಳ ವಿರುದ್ಧ ಚುನಾವಣಾ ಸಂಸ್ಥೆ ಕ್ರಮ ಕೈಗೊಳ್ಳಲಿದೆ. ಎಲ್ಲಾ ಕೋವಿಡ್-ಸಂಬಂಧಿತ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೆ ಎಂದು ಅವಲೋಕಿಸಲು ಮುಖ್ಯ ಕಾರ್ಯದರ್ಶಿ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.

ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದ್ದಲ್ಲಿ ರ‍್ಯಾಲಿಯನ್ನು ರದ್ದುಗೊಳಿಸಲಾಗುವುದು ಮತ್ತು ಆ ಅಭ್ಯರ್ಥಿ ಅಥವಾ ಪಕ್ಷದ ಮುಂದಿನ ರ‍್ಯಾಲಿಗಳನ್ನು ನಿಷೇಧಿಸುವ ಸಾಧ್ಯತೆಯೂ ಇರುತ್ತದೆ. ಇನ್ನು ಸಾಮಾಜಿಕ ಜಾಲತಾಣಗಳ ಮೇಲೂ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ಚುನಾವಣಾ ಆಯೊಗ ಎಚ್ಚರಿಸಿದೆ.

ಚುನಾವಣಾ ಆಯೋಗವು ಕಟ್ಟುನಿಟ್ಟಾದ ಕೋವಿಡ್ ಮಾರ್ಗಸೂಚಿಗಳನ್ನು ರೂಪಿಸಿದೆ, ಮನೆ-ಮನೆ ಪ್ರಚಾರಕ್ಕೆ ಕೇವಲ ಐದು ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಭೌತಿಕ ರ‍್ಯಾಲಿಗಳಿಗೆ ಹಾಜರಾಗುವ ಜನರಿಗೆ ರಾಜಕೀಯ ಪಕ್ಷವು ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು ನೀಡುವುದು ಕಡ್ಡಾಯ. ಚುನಾವಣಾ ಆಯೋಗವು ವಿಜಯೋತ್ಸವವನ್ನು ಸಹ ನಿಷೇಧಿಸಿದೆ, ವಿಜೇತ ಪ್ರಮಾಣಪತ್ರವನ್ನು ಪಡೆಯಲು ಅಭ್ಯರ್ಥಿಯ ಜೊತೆಯಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

Share