Connect with us


      




ಕರ್ನಾಟಕ

ಸದ್ಯಕ್ಕಿಲ್ಲ ನೈಟ್ ಕರ್ಫ್ಯೂ

Vanitha Jain

Published

on

ಬೆಂಗಳೂರು,ಡಿಸೆಂಬರ್ 09(ಯು.ಎನ್.ಐ) ಒಮೈಕ್ರಾನ್ ಪಸರಿಸುವಿಕೆಯ ಭೀತಿಯ ಹಿನ್ನಲೆಯಲ್ಲಿ ಸೋಂಕು ತಡೆಗಟ್ಟಲು ಸರ್ಕಾರ ಮತ್ತೆ ನೈಟ್ ಕರ್ಫ್ಯೂ ಜಾರಿಗೊಳಿಸಲಿದೆ ಎಂಬುದಿನ್ನೂ ನಿರ್ಧಾರವಾಗಿಲ್ಲ. ಸದ್ಯಕ್ಕೆ ನೈಟ್ ಕಫ್ರ್ಯೂ ಇಲ್ಲ ಎಂಬುದನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸಚಿವ ಸಂಪುಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಒಂದು ವಾರದ ಬಳಿಕ ನೈಟ್ ಕಫ್ರ್ಯೂ ಮಾಡಬೇಕೇ ಬೇಡವೇ ಎಂಬುದು ನಿರ್ಧಾರವಾಗಲಿದೆ. ಇದರೊಂದಿಗೆ ಕ್ರಿಸ್ಮಸ್, ಹೊಸ ವರ್ಷಾಚರಣೆ ಬಗ್ಗೆಯೂ ನಿರ್ಧಾರವಾಗಲಿದೆ ಎಂದಿದ್ದಾರೆ.

ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಅಧ್ಯಕ್ಷ ಡಾ| ಎಂ.ಕೆ ಸುದರ್ಶನ್ ಜೊತೆಗೆ ಚರ್ಚಿಸಿ ಒಮೈಕ್ರಾನ್ ಬಗ್ಗೆ ವಿವರಣೆ ಪಡೆಯಲಾಗಿದೆ. ತಾಂತ್ರಿಕ ಸಲಹಾ ಸಮಿತಿ ಪಾಸಿಟಿವ್ ಗಾಬರಿಯಾಗುವ ಅಗತ್ಯವಿಲ್ಲವೆಂದಿದ್ದರೂ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಿರುವುದಾಗಿ ಬೊಮ್ಮಾಯಿ ಹೇಳಿದರು.

Share