Connect with us


      




ದೇಶ

ದೆಹಲಿಯಲ್ಲಿ ಲಾಕ್‍ಡೌನ್ ವಿಧಿಸುವುದಿಲ್ಲ: ಹೆದರಬೇಡಿ

Vanitha Jain

Published

on

ನವದೆಹಲಿ: ಜನೆವರಿ 11 (ಯು.ಎನ್.ಐ.) ದೆಹಲಿಯಲ್ಲಿ ಯಾವುದೇ ಲಾಕ್‍ಡೌನ್ ಹೇರುವುದಿಲ್ಲ. ದೆಹಲಿಯಲ್ಲಿ ಕೊರೋನಾ ಪಾಸಿಟಿವಿಟಿ ದರವು ಏಳು ತಿಂಗಳಲ್ಲಿ ಗರಿಷ್ಟ ಶೇ 25 ರಷ್ಟಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.

ಕೋವಿಡ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಸಲವಾಗಿ ಉನ್ನತ ಆಸ್ಪತ್ರೆಗೆ ಭೇಟಿ ನೀಡಿದ ಕೇಜ್ರಿವಾಲ್, “ಚಿಂತಿಸಬೇಡಿ, ನಾವು ಲಾಕ್‍ಡೌನ್ ಅನ್ನು ವಿಧಿಸುವುದಿಲ್ಲ. ದೆಹಲಿಯಲ್ಲಿ ಇಂದು ಸುಮಾರು 22,000 ಹೊಸ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ದೆಹಲಿ ಮುಖ್ಯಮಂತ್ರಿ ರಾಜಧಾನಿಯಲ್ಲಿ ಪ್ರಕರಣಗಳ ಏರಿಕೆಯ ಕುರಿತು ತಿಳಿಸಿದರು.

“ದೆಹಲಿಯಲ್ಲಿ ಸುಮಾರು 20,000-22,000 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಂದ ಪಾಸಿಟಿವಿಟಿ ಪ್ರಮಾಣವು ಶೇ24-25 ರಷ್ಟಿದೆ. ನಾವು ಬಲವಂತದಿಂದ ದೆಹಲಿಯಲ್ಲಿ ರಾತ್ರಿ ಕಫ್ರ್ಯೂನಂತಹ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದರು.
ಕಳೆದ ವರ್ಷದ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಹೆಚ್ಚಿನ ಪ್ರಕರಣಗಳು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿವೆ. ಒಮೈಕ್ರಾನ್ ಸೋಂಕಿನ ಲಕ್ಷಣಗಳು ಸೌಮ್ಯವಾಗಿದೆ ಆದರೆ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿಯ ಎಲ್ಲಾ ಖಾಸಗಿ ಕಚೇರಿಗಳನ್ನು ಮುಚ್ಚಲು ಮತ್ತು ಅವರ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು ಆದೇಶಿಸಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವವರು ಮಾತ್ರ ಹೊಸ ನಿಯಮಕ್ಕೆ ವಿನಾಯಿತಿ ಪಡೆಯುತ್ತಾರೆ ಎಂದು ದೆಹಲಿ ವಿಪತ್ತು ನಿರ್ವಹಣಾ ಸಂಸ್ಥೆ (ಡಿಡಿಎಂಎ) ಸಭೆಯಲ್ಲಿ ನಿರ್ಧರಿಸಲಾಗಿದೆ. ರೆಸ್ಟೋರೆಂಟ್‍ಗಳು ಮತ್ತು ಬಾರ್‍ಗಳನ್ನು ಸಹ ಮುಚ್ಚಲಾಗಿದೆ ಮತ್ತು ಟೇಕ್‍ಅವೇಗಳು ಮತ್ತು ಹೋಮ್ ಡೆಲಿವರಿಗಳನ್ನು ಮಾತ್ರ ಅನುಮತಿಸಲಾಗಿದೆ.

“ಡಿಡಿಎಂಎ ಸಭೆಯಲ್ಲಿ ನಿರ್ಬಂಧಗಳ ವಿಚಾರದಲ್ಲಿ ಸಂಪೂರ್ಣ ಎನ್‍ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ವ್ಯಾಪ್ತಿಗೆ ಒಳಪಡುವಂತೆ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ವಿನಂತಿಸಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.

ಮತ್ತೊಂದು ವಾರಾಂತ್ಯದ ಕಫ್ರ್ಯೂ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಮುಂದಿನ 48 ಗಂಟೆಗಳಲ್ಲಿ ನಗರದಲ್ಲಿ ಪ್ರಕರಣಗಳು ಉತ್ತುಂಗಕ್ಕೇರಬಹುದು ಎಂದು ಹೇಳಿದ್ದಾರೆ.

Share