Published
4 months agoon
By
UNI Kannadaಪ್ಯಾರಿಸ್: ಜನೆವರಿ 27 (ಯು.ಎನ್.ಐ.) ಲಸಿಕೆ ಹಾಕಿಸಿಕೊಳ್ಳದ ಕಾರಣ ಆಸ್ಟ್ರೇಲಿಯನ್ ಓಪನ್ನಿಂದ ಹೊರಗುಳಿದಿರುವ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮುಂಬರುವ ಫ್ರೆಂಚ್ ಓಪನ್ನಲ್ಲಿ ಆಡುವ ಲಕ್ಷಣಗಳು ಗೋಚರಾವಾಗುತ್ತಿವೆ. ಫ್ರಾನ್ಸ್ ನಲ್ಲಿ ಕೋವಿಡ್ ನಿಯಮಾವಳಿಗಳನ್ನು ಸಡಿಲಗೊಳಿಸಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಲಸಿಕೆ ಹಾಕಿಸಿಕೊಳ್ಳದವರ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಫ್ರಾನ್ಸ್ ನಲ್ಲಿ ಕೋವಿಡ್ ಹೊಸ ಗೈಡ್ ಲೈನ್ಸ್ ಅನ್ನು ಮುಂದಿನ ಸೋಮವಾರದಿಂದ ಜಾರಿಗೆ ಬರಲಿದ್ದು, ಅದರಲ್ಲಿ ವ್ಯಾಕ್ಸಿನ್ ಡೋಸ್ ಪಡೆಯದಿದ್ದರೂ ಪರವಾಗಿಲ್ಲ ಎಂದು ಹೇಳಿದೆ. ಆದರೆ, ಒಂದು ಷರತ್ತನ್ನು ವಿಧಿಸಿರುವ ಫ್ರಾನ್ಸ್ ಸರ್ಕಾರ, ವ್ಯಕ್ತಿಯೊಬ್ಬ ಹಿಂದಿನ ಆರು ತಿಂಗಳಲ್ಲಿ ಕೋವಿಡ್ ಗೆ ತುತ್ತಾಗಿರಬಾರದು. ಈ ವರದಿಯನ್ನು ಹೊಂದಿದ್ದರೆ ಫ್ರಾನ್ಸ್ ಪ್ರವೇಶ ಮಾಡಲು ಕಡ್ಡಾಯ ಲಸಿಕೆಯಿಂದ ವಿನಾಯಿತಿ ಇದೆ ಎಂಬ ಹೊಸ ನಿಯಮವನ್ನು ಅಳವಡಿಸಿಕೊಂಡಿದೆ.
ಇದು ಜಾಕೊವಿಕ್ ಗೆ ಫ್ರಾನ್ಸ್ ಪ್ರವೇಶಕ್ಕೆ ಹಾದಿ ಸುಗಮವಾದಂತಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಆಸ್ಟ್ರೇಲಿಯನ್ ಓಪನ್ ಸಮಯದಲ್ಲಿ ಜಾಕೋಗೆ ಸೋಂಕು ಧೃಢಪಟ್ಟಿತ್ತು ಎಂದು ಅವರೇ ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜೊಕೊವಿಕ್ ಅವರು ಮುಂದಿನ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಾದ ಮೇ ಮತ್ತು ಜೂನ್ನಲ್ಲಿ ಫ್ರೆಂಚ್ ಓಪನ್ನಲ್ಲಿ ಆಡಬಹುದು.
ಐಪಿಎಲ್ 2022: ಮುಂಬೈ ಇಂಡಿಯನ್ಸ್ ಬೆಂಬಲಿಸಿ ಪ್ರೊಫೈಲ್ ಚಿತ್ರ ಬದಲಿಸಿದ ಆರ್ ಸಿಬಿ
ಥಾಯ್ಲೆಂಡ್ ಓಪನ್: ಚೀನಾ ಆಟಗಾರ್ತಿ ಎದುರು ಪಿ.ವಿ.ಸಿಂಧುಗೆ ಸೋಲು
ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಗೆ 2ನೇ ಬಾರಿ ಸೋಲುಣಿಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ
ಮುಂದಿನ ಐಪಿಎಲ್ ನಲ್ಲಿ ಆಡ್ತಾರಾ ಧೋನಿ? ಎಂಎಸ್ ಡಿ ಕೊಟ್ಟ ಉತ್ತರವೇನು ಗೊತ್ತಾ?
ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್ ಆಗಲಿರುವ ವಿವಿಎಸ್ ಲಕ್ಷ್ಮಣ್
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಫೈನಲ್ ಗೆ ಲಗ್ಗೆ ಇಟ್ಟ ನಿಖತ್ ಜರೀನ್