Connect with us


      
ಕ್ರೀಡೆ

ಜೊಕೊವಿಚ್‌ ವೀಸಾ ರದ್ದು … ಆಸ್ಟ್ರೇಲಿಯ ಸರ್ಕಾರ ಸಂಚಲನ ನಿರ್ಧಾರ

UNI Kannada

Published

on

ಮೆಲ್ಬೋರ್ನ್, ಜ 6 (ಯುಎನ್‌ ಐ) ಸೆರ್ಬಿಯಾದ ವಿಶ್ವ ವಿಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್‌ ಅವರ ವೀಸಾವನ್ನು ಆಸ್ಟ್ರೇಲಿಯದ ಬಾರ್ಡರ್ ಫೋರ್ಸ್ ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಜೊಕೊವಿಚ್‌ ಬುಧವಾರ ಮಧ್ಯರಾತ್ರಿ ಮೆಲ್ಬೋರ್ನ್‌ಗೆ ಆಗಮಿಸಿದ ನಂತರ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ ನಲ್ಲಿ ಆಡಲು ಜೊಕೊವಿಚ್‌ ಅವರಿಗೆ ಅನುಮತಿ ಲಭಿಸುವ ಜತೆಗೆ ವೈದ್ಯಕೀಯ ವಿನಾಯಿತಿ ಪಡೆದುಕೊಂಡಿದ್ದರು. ಆದರೆ, ಕೋವಿಡ್‌ ನಿಬಂಧನೆಗಳಿಗೆ ಯಾರೊಬ್ಬರೂ ಅತೀತರಲ್ಲ, ಹಾಗಾಗಿ ಜೊಕೊವಿಚ್‌ ವೀಸಾ ರದ್ದುಗೊಳಿಸಿದ್ದೇವೆ. ಎಂದು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್‌ ಮಾರಿಸನ್‌ ಟ್ವೀಟ್‌ ಮಾಡಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಲಸಿಕೆಹಾಕಿಸಿಕೊಳ್ಳದೆ ವೈದ್ಯಕೀಯ ವಿನಾಯಿತಿ ಇದೆ ಎಂದು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ನೊವಾಕ್ ಜೊಕೊವಿಚ್‌ ಅವರನ್ನು ಮುಂದಿನ ವಿಮಾನದಲ್ಲಿ ದೇಶದಿಂದ ಹೊರಗೆ ಕಳುಹಿಸಲಾಗುವುದು ಎಚ್ಚರಿಸಿದ್ದಾರೆ.

ಆಸ್ಟ್ರೇಲಿಯ ಪ್ರವೇಶಕ್ಕೆ ಜೊಕೊವಿಚ್‌ ಅವರು ಸಾಕಷ್ಟು ಪುರಾವೆ ಒದಗಿಸಲು ವಿಫಲರಾಗಿದ್ದಾರೆ. ಹಾಗಾಗಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾ ಹೇಳಿದೆ. ಆದರೆ ಮೆಲ್ಬೊರ್ನ್‌ ನಲ್ಲಿರುವ ತುಲ್ಲಾಮರೈನ್‌ ವಿಮಾನ ನಿಲ್ದಾಣದಲ್ಲಿ ತಮ್ಮ ಪುತ್ರನನ್ನು ಗಂಟೆಗಳ ಕಾಲ ನಿರ್ಬಂಧಿಸಿ, ವಿನಾಯಿತಿಯ ಬಗ್ಗೆ ಪ್ರಶ್ನಿಸಿರುರವುದನ್ನು ಜೊಕೊವಿಚ್‌ ತಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share